ಆಸ್ಟ್ರೀಯಾ ದೇಶದ ರೈತರ ಕೃಷಿ ಪದ್ಧತಿಗಳನ್ನು ವೀಕ್ಷಿಸಿದ ತರಳಬಾಳು ಶ್ರೀ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ದೀರ್ಘಕಾಲೀನ ಪರಿಹಾರಗಳನ್ನು ಕಂಡುಕೊಳ್ಳಲು ಮತ್ತು ಬೆಳೆ ಉತ್ಪಾದಕತೆ ಮತ್ತು ರೈತರ ಆದಾಯವನ್ನು ಸುಧಾರಿಸಲು ಸದಾ ಚಿಂತಿಸುವ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು‌ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಆಸ್ಟ್ರೀಯಾ ದೇಶದಲ್ಲಿ ರೈತರೊಂದಿಗೆ ಕೃಷಿ ಸವಾಲಿನ ಬಗ್ಗೆ  ಚರ್ಚಿಸಿದರು.

ಆಸ್ಟ್ರಿಯಾ ಪ್ರವಾಸದಲ್ಲಿರುವ ಶ್ರೀಗಳು, ಆ ದೇಶದ ರಾಜಧಾನಿ ವಿಯೆನ್ನಾದಲ್ಲಿ 1977-79 ರ ಅವಧಿಯಲ್ಲಿ ನಾವು ವ್ಯಾಸಾಂಗ ಮಾಡಿದ್ದರು.ತಮ್ಮ ವಿದ್ಯಾರ್ಥಿ ಜೀವನದಲ್ಲಿ ನೆರವಾದ ಅಧ್ಯಾಪಕರನ್ನು ಭೇಟಿ ಮಾಡಿ ಗೌರವ ಸಮರ್ಪಿಸಲು ಆಸ್ಟ್ರಿಯಾ ದೇಶಕ್ಕೆ ದಯಮಾಡಿಸಿರುವ ಪೂಜ್ಯರು ಅಲ್ಲಿನ ಕೃಷಿ ಪದ್ಧತಿಗಳ ಮೆಚ್ಚುಗೆ ವ್ಯಕ್ತಪಡಿಸಿ ಬಗ್ಗೆ ಇಲ್ಲಿನ ರೈತ ಸಮುದಾಯಕ್ಕೆ ರವಾನಿಸಿರುವ ಸಂದೇಶದಲ್ಲಿ :ಆಸ್ಟ್ರಿಯಾದ ಪಶ್ಚಿಮ ಭಾಗದಲ್ಲಿ ಇನ್ಸ್‌ಬ್ರಕ್ ಬಳಿಯ ಟ್ರಿನ್ ಎಂಬ ಸ್ಥಳದಲ್ಲಿ ಕೃಷಿ ಭೂಮಿಗೆ ಭೇಟಿ ನೀಡಿದೆವು. ಈ ಸ್ಥಳವು ಜರ್ಮನ್ ಗಡಿಗೆ ಹತ್ತಿರದಲ್ಲಿದೆ.ಇಲ್ಲಿನ ಜಮೀನಿನಲ್ಲಿ ದುಡಿಯುತ್ತಿರುವ ರೈತ ಕುಟುಂಬದ ಸದಸ್ಯರೊಂದಿಗೆ ಮಾತನಾಡಿದರು.

ಮನೆಯವರೆಲ್ಲರೂ – ತಂದೆ, ತಾಯಿ, ಮಗ ಮತ್ತು ಮಗಳು ಒಟ್ಟಾಗಿ ಹೊಲದಲ್ಲಿ ಹುಲ್ಲು ಕತ್ತರಿಸುವ ಮತ್ತು ಒಂದೆಡೆ ಸಂಗ್ರಹಿಸುವ ಕೆಲಸ ಮಾಡುತ್ತಿದ್ದರು.ಹುಲ್ಲು ಕತ್ತರಿಸುವ ಟ್ರಾಕ್ಟರ್ ನ್ನು ನೋಡುತ್ತಾ ನಾವು ಆ ಹುಡುಗ ಓಡಿಸುತ್ತಿದ್ದ ಆ ಟ್ರ್ಯಾಕ್ಟರ್ ಹತ್ತಿ ಸವಾರಿ ಮಾಡಿದರು. ತನಗೆ ಉನ್ನತ ವ್ಯಾಸಂಗದಲ್ಲಿ ಆಸಕ್ತಿಯಿಲ್ಲ, ಆದರೆ ಪೂರ್ವಿಕರ ಆ ಜಮೀನಿನ ಸಾಗುವಳಿಯಲ್ಲಿ ತನಗೆ ಆಸಕ್ತಿ ಇದೆ ಎಂದು ಆ ಹುಡುಗ ನಮಗೆ ತಿಳಿಸಿದ. ರೈತರು ಹುಲ್ಲನ್ನೆಲ್ಲಾ ಸಂಗ್ರಹಿಸಿ, ಬೇಸಿಗೆ ಕಾಲದಲ್ಲಿ ಅದನ್ನೆಲ್ಲಾ ಒಂದು ಕಡೆ ಒಟ್ಟು ಮಾಡಿ, ಚಳಿಗಾಲದಲ್ಲಿ ಜಾನುವಾರುಗಳಿಗೆ ಮೇವಿನ ರೂಪದಲ್ಲಿ ಆಹಾರಕ್ಕಾಗಿ ಸಂಗ್ರಹಿಸುತ್ತಾರೆ. ನಾವು ಭೇಟಿಯಾದ ರೈತ ಕುಟುಂಬವು ವರ್ಷಕ್ಕೆ ಸುಮಾರು 1,20,000/- ಯುರೋ ಡಾಲರ್ ಗಳಿಸುತ್ತದೆ. ಅಂದರೆ ಅದರ ಮೌಲ್ಯ ಸುಮಾರು 11,00,000/- ಭಾರತೀಯ ರೂಪಾಯಿಗಳು.
ನಾವಿದ್ದ ಆ ಪ್ರದೇಶದ ಭೂಮಿಯ ಸುತ್ತಲೂ ಕಾಣುವ ಪರ್ವತಗಳನ್ನು ಆಲ್ಪ್ಸ್ ಪರ್ವತಗಳು ಎಂದು ಕರೆಯಲಾಗುತ್ತದೆ. ಚಳಿಗಾಲದಲ್ಲಿ ಈ ಎಲ್ಲಾ ಪರ್ವತಗಳು ಹಿಮದಿಂದ ಆವೃತವಾಗುತ್ತವೆ.

ಚಳಿಗಾಲದಲ್ಲಿ ಸ್ಕೀಯಿಂಗ್ (Skiing) ಮಾಡಲು ಯುರೋಪಿನಾದ್ಯಂತ ಜನರು ಇಲ್ಲಿಗೆ ಬರುತ್ತಾರೆ. ಆಸ್ಟ್ರಿಯನ್ ಸರ್ಕಾರವು ಭೂಮಿಯ ವಿಸ್ತೀರ್ಣವನ್ನು ಆಧರಿಸಿ ರೈತರಿಗೆ ತಮ್ಮ ಭೂಮಿಯನ್ನು ನಿರ್ವಹಿಸಲು ಪ್ರತಿ ವರ್ಷ ಸ್ವಲ್ಪ ಹಣವನ್ನು ಪಾವತಿಸುತ್ತದೆ.
ಮರಗಳನ್ನು ಕಡಿಯಲು ರೈತರಿಗೆ ಇಲ್ಲಿ ಯಾವುದೇ ಪರವಾನಗಿಯ ಅಗತ್ಯವಿಲ್ಲ. ಆದರೆ ಯಾವುದೇ ಮರವನ್ನು ಕಡಿಯುವ ಮೊದಲು ಅವರು ಹೊಸ ಮರಗಳನ್ನು ನೆಡಬೇಕು.

ಅದು ಕಾರ್ಯನಿರ್ವಹಿಸುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಲು ಸೈರನ್ ನ್ನು ಪ್ರತಿ ಶನಿವಾರ ಮಧ್ಯಾಹ್ನ 12 ಗಂಟೆಗೆ ಪರೀಕ್ಷೆ ಮಾಡಲಾಗುತ್ತದೆ. ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡಾಗ ಅಥವಾ ಬೆಟ್ಟ ಪ್ರದೇಶದಲ್ಲಿ ಯಾವುದೇ ಅವಘಡ ಸಂಭವಿಸಿದಾಗ, ಜನರನ್ನು ಎಚ್ಚರಿಸಲು ಮತ್ತು ಬೆಂಕಿಯನ್ನು ನಂದಿಸಲು ಮತ್ತು ಗಾಯಗೊಂಡವರಿಗೆ ಸಹಾಯ ಮಾಡಲು ಮೂರು ಬಾರಿ ಸೈರನ್ ನುಡಿಸಲಾಗುತ್ತದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.ನಾಳೆ ಇಲ್ಲಿಂದ ಸ್ವಿಟ್ಜರ್ಲೆಂಡ್‌ ದೇಶದ ಜ್ಯೂರಿಚ್‌ ನಗರಕ್ಕೆ ಶ್ರೀ ಜಗದ್ಗುರುಗಳವರು ಪ್ರಯಾಣಿಸಲಿದ್ದಾರೆ.

 

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *