Connect with us

Dvgsuddi Kannada | online news portal | Kannada news online

ರೈತರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ನೀಡುವುದು ಸರ್ಕಾರದ ಕರ್ತವ್ಯ: ಹಿಮಾಚಲಯ ಪ್ರದೇಶ ರಾಷ್ಟ್ರೀಯ ಕೃಷಿ ಸಮ್ಮೇಳನದಲ್ಲಿ ತರಳಬಾಳು ಶ್ರೀ ಅಭಿಪ್ರಾಯ

ಪ್ರಮುಖ ಸುದ್ದಿ

ರೈತರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ನೀಡುವುದು ಸರ್ಕಾರದ ಕರ್ತವ್ಯ: ಹಿಮಾಚಲಯ ಪ್ರದೇಶ ರಾಷ್ಟ್ರೀಯ ಕೃಷಿ ಸಮ್ಮೇಳನದಲ್ಲಿ ತರಳಬಾಳು ಶ್ರೀ ಅಭಿಪ್ರಾಯ

ದಾವಣಗೆರೆ: ರೈತರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ನೀಡುವುದು ಸರ್ಕಾರದ ಕರ್ತವ್ಯ. ಈ ಮೂಲಕ ಸರ್ಕಾರ ಅಗತ್ಯ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದು‌ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

75ನೇ ಸ್ವಾತಂತ್ರ್ಯ ಅಮೃತಮಹೋತ್ಸವದ ನಿಮಿತ್ತ ಭಾರತೀಯ ಕೃಷಿ ಸಂಶೋಧನಾ ಮಂಡಳಿ, ನವದೆಹಲಿ ಮತ್ತು ಡಾ. ಯಶವಂತ್ ಸಿಂಗ್ ಪರ್ಮಾರ್ ತೋಟಗಾರಿಕೆ ಮತ್ತು ಅರಣ್ಯ ವಿಶ್ವವಿದ್ಯಾಲಯ, ನೌನಿ, ಸೋಲನ್, ಹಿಮಾಚಲ ಪ್ರದೇಶದ ಜಂಟಿಯಾಗಿ ಸೋಲಾನ್ ನಲ್ಲಿ ಆಯೋಜಿಸಿರುವ ಎರಡು ದಿನಗಳ “12 ನೇ ದ್ವೈವಾರ್ಷಿಕ ರಾಷ್ಟ್ರೀಯ ಕೃಷಿ ವಿಜ್ಞಾನ ಸಮ್ಮೇಳನ 2022”ದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಕೃಷಿ ಉತ್ಪನ್ನಗಳ ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ಮಣ್ಣಿನ ಆರೋಗ್ಯವನ್ನು ಉಳಿಸಲು ಸಹಾಯ ಮಾಡುವ ಕೃಷಿ ಪದ್ಧತಿಗಳಲ್ಲಿ ರಸಗೊಬ್ಬರಗಳ ಹಾನಿಕಾರಕ ಪರಿಣಾಮಗಳನ್ನು ತಡೆಗಟ್ಟಲು ನಾವು ಇತರ ಕೆಲವು ಪರ್ಯಾಯಗಳನ್ನು ಹುಡುಕಬೇಕು” ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆತ್ಮ ನಿರ್ಭರ ಭಾರತ್ ನ ದೃಷ್ಟಿಕೋನವನ್ನು ಒತ್ತಿಹೇಳುತ್ತಾ, ಉದ್ದೇಶಿತ ನಿರ್ಣಯಗಳನ್ನು ಸಾಧಿಸಲು ಮತ್ತು ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುವ ಧ್ಯೇಯವನ್ನು ಸಾಕಾರಗೊಳಿಸುವತ್ತ ಮುನ್ನಡೆಯಲು ಇದು ಸೂಕ್ತ ಸಮಯವಾಗಿದೆ ಎಂದರು.

ನೀರನ್ನು ಉಳಿಸಲು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವುದು ಈ ಅಗತ್ಯವಾಗಿದೆ. ಹೊಸ ಮತ್ತು ಇತ್ತೀಚಿನ ಕೃಷಿ ತಂತ್ರಜ್ಞಾನಗಳನ್ನು ಪರಿಣಾಮಕಾರಿಯಾಗಿ ರೈತರ ಮನೆ ಬಾಗಿಲಿಗೆ ಪ್ರಸಾರ ಮಾಡಲು ಕೃಷಿ ವಿಜ್ಞಾನಿಗಳನ್ನು ಒತ್ತಾಯಿಸಿದರು. ರೈತರು ತಮ್ಮ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗುವಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯವಾಗಿದೆ. ನೈಸರ್ಗಿಕ ಕೃಷಿ ಪದ್ಧತಿಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ತೇಜಿಸಲು ಭಾರತ ಸರ್ಕಾರ ಮತ್ತು ಕೃಷಿ ಸಚಿವಾಲಯದ ಸಂಘಟಿತ ಪ್ರಯತ್ನಗಳು ಶ್ಲಾಘನೀಯವೆಂದು ಅಭಿಪ್ರಾಯಪಟ್ಟರು.

ಕರ್ನಾಟಕದಲ್ಲಿ ರೈತರ ಉನ್ನತಿಗಾಗಿ ಕೈಗೊಳ್ಳಲಾದ 20 ಕ್ಕೂ ಹೆಚ್ಚು ಏತನೀರಾವರಿ ಯೋಜನೆಗಳ ಮೂಲಕ 500 ಕ್ಕೂ ಅಧಿಕ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಗಳ ಬಗ್ಗೆ, 2018 ರಲ್ಲಿ ಭೂಮಿ ಆನ್ ಲೈನ್ ತಂತ್ರಾಂಶವನ್ನು ರಚಿಸಿ ಮಧ್ಯವರ್ತಿಗಳ ಹಾವಳಿ ಇಲ್ಲದೆ 3000 ಕೋಟಿಗೂ ಅಧಿಕ ಹಣವನ್ನು ರೈತರಿಗೆ ನೇರವಾಗಿ ತಲುಪಿಸಿದ ರಾಷ್ಟ್ರಕ್ಕೆ ಮಾದರಿಯಾದ ಯೋಜನೆ, ಬೆಳೆವಿಮೆ, ಬರ-ನೆರೆ ಪರಿಹಾರವನ್ನು ಅನುಸರಿಸಬೇಕಾದ ವೈಜ್ಞಾನಿಕ ಮಾನದಂಡಗಳನ್ನು ಅಳವಡಿಸುವ ಬಗ್ಗೆ, ಕರ್ನಾಟಕದಲ್ಲಿ ಬೆಳೆ ಸಮೀಕ್ಷೆಗೆ ಹೊರ ತಂದಿರುವ ತಂತ್ರಾಂಶ, ರೈತ ಉತ್ಪಾದಕ ಕಂಪನಿಗಳು(FPO)) ಸೇರಿದಂತೆ ರೈತರ ಬಾಳಿಗೆ ಬೆಳಕಾಗಿರುವ ಯೋಜನೆಗಳನ್ನು ದೇಶವ್ಯಾಪಿ ಅಳವಡಿಸುವಂತೆ ಸಲಹೆ ನೀಡಿದರು.

ರೈತಕಲ್ಯಾಣ ಕಾರ್ಯಗಳ ಬಗ್ಗೆ ವಿಸ್ತೃತ ಮಾಹಿತಿ ಹೊಂದಿರುವ ಕಾರ್ಯದರ್ಶಿ (DARE) ಮತ್ತು ಮಹಾನಿರ್ದೇಶಕ (ICAR) ಡಾ. ತ್ರಿಲೋಚನ್ ಮೊಹಾಪಾತ್ರ, ಐಸಿಎಆರ್ ಉಪ ಮಹಾನಿರ್ದೇಶಕ (ಕೃಷಿ ವಿಸ್ತರಣೆ) ಡಾ.ಅಶೋಕ್ ಕುಮಾರ್ ಸಿಂಗ್ ರವರು ಪೂಜ್ಯರ ಸಲಹೆಗಳನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಬಳಿ ಚರ್ಚಿಸುವುದಾಗಿ ಶ್ರೀಗಳು ತಿಳಿಸಿದರು.

ಶ್ರೀ ತರಳಬಾಳು ಜಗದ್ಗುರುಗಳವರನ್ನು ಹಿಮಾಚಲ ಪ್ರದೇಶದ ಸಂಸ್ಕೃತಿಯಂತೆ ಸಾಂಪ್ರದಾಯಿಕವಾಗಿ ಭಕ್ತಿಪೂರ್ವಕವಾಗಿ ಅಲ್ಲಿನ ಶಿಷ್ಟಾಚಾರದೊಂದಿಗೆ ಸ್ವಾಗತಿಸಲಾಯಿತು. ಕರ್ನಾಟಕ ಯೋಜನಾ ಆಯೋಗದ ನಿರ್ದೇಶಕ ಡಾ.ಕೆ.ಪಿ.ಬಸವರಾಜಪ್ಪ, ದಾವಣಗೆರೆ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಶ್ರೀ ದೇವರಾಜ್ ಕೃಷಿ ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top