ಸಿರಿಗೆರೆ: ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಿರಿಗೆರೆಯಲ್ಲಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡಲು ವಿದ್ಯಾರ್ಥಿವೇತ “ತರಳಬಾಳು ಪ್ರತಿಭಾ ಪುರಸ್ಕಾರ-2022” ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ.
SSLC ಪರೀಕ್ಷೆಯಲ್ಲಿ ಶೇ.80 ಹಾಗೂ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳು ಲಿಖಿತ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ. ಬೇರೆ ಸಂಸ್ಥೆ / ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳಿಗೂ ಅವಕಾಶವಿರುತ್ತದೆ. ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಸಲ್ಲಿಸಲು ದಿನಾಂಕ:25-5-2022ಕೊನೆಯ ದಿನಾಂಕವಾಗಿರುತ್ತದೆ.
ದಿನಾಂಕ : 26-5-2022 ರಂದು ಗುರುವಾರ ಸಿರಿಗೆರೆಯ ಎಂ.ಬಸವಯ್ಯ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಗ್ಗೆ 11 ಗಂಟೆಗೆ ಪರೀಕ್ಷೆ ನಡೆಸಲಾಗುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ಊಟ-ವಸತಿ ಹಾಗೂ ಕಾಲೇಜು ಶುಲ್ಕವನ್ನು ನೀಡಲಾಗುವುದು.ಸಂಪರ್ಕಿಸಬೇಕಾದ ವಿಳಾಸ:ಪ್ರಾಚಾರ್ಯರು ಎಂ ಬಸವಯ್ಯ ವಸತಿ ಪದವಿ ಪೂರ್ವ ಕಾಲೇಜು, ಸಿರಿಗೆರೆ-577541 ಮೊ.ಸಂಖ್ಯೆ : 7892893772, 9663956275, 9449981283, 7026753996, 9964118825, 9448656496.