ಭರಮಸಾಗರ: ಮುಂಬರುವ ಫೆಬ್ರವರಿ 16ರಿಂದ 24ರ ವರೆಗೆ ಭರಮಸಾಗರದಲ್ಲಿ ನಡೆಯಬೇಕಾಗಿದ್ದ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಮುಂದೂಡಲಾಗಿದೆ. ಮುಂದಿನ ವರ್ಷ ಮಹೋತ್ಸವ ಭರಮಸಾಗರದಲ್ಲಿ ನಡೆಸಲಾಗುವುದು ಎಂದು ಸಿರಿಗೆರೆಯ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಭರಮಸಾಗರ ಏತ ನೀರಾವರಿ ಯೋಜನೆಯ
ಭರಮಣ್ಣನಾಯಕನ ಕೆರೆ ವೀಕ್ಷಣೆ ಮಾಡಿದ ನಂತರ ಏರ್ಪಡಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರಗಾಲವುದ್ದು, ಜನರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಜನರು ಕಷ್ಟದಲ್ಲಿರುವಾಗ ವಿಜೃಂಬಣೆಯ ಮಹೋತ್ಸವ ಮಾಡುವುದು ಸರಿಯಲ್ಲ. ಹೀಗಾಗಿ ಭರಮಸಾಗರದಲ್ಲಿ ನಡೆಯಬೇಕಾಗಿದ್ದ ಅದ್ದೂರಿ ಆಚರಣೆ ಮುಂದೂಡಿ, ಈ ಭಾರಿ ಸಿರಿಗೆರೆಯ ಮಠದಲ್ಲಿಯೇ ಸರಳವಾಗಿ, ಸಾಂಪ್ರಾದಾಯಿಕವಾಗಿ ಆಚರಿಸಲಾಗುವುದೆಂದು ಪ್ರಕಟಿಸಿದರು.