ದಾವಣಗೆರೆ: ವಿಜಯನಗರ ಜಿಲ್ಲೆಯ ಕೊಟ್ಟೂರಲ್ಲಿ ಜ.28ರಿಂದ ಫೆ.5ರವರೆಗೆ 75ನೇ ವರ್ಷದ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆಯಲಿದೆ. ನಾಳೆ (28) ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಜಗದ್ಗುರುಗಳು ಸಿರಿಗೆರೆಯಿಂದ ಕೊಟ್ಟೂರಿಗೆ ಹೋಗುವ ಮಾರ್ಗ ಮೂಲಕ ಸಂಚರಿಸಲಿದ್ದಾರೆ. ದಾವಣಗೆರೆ ಶಿವಸೈನ್ಯದಿಂದ ಬೃಹತ್ ಕಾರು, ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ.
ಹುಣ್ಣಿಮೆ ಮಹೋತ್ಸವಕ್ಕೆ ಅದ್ಧೂರಿ ಸ್ವಾಗತ ನೀಡುವ ಸಂಬಂಧ ಜ.28ರಂದು ದಾವಣಗೆರೆಯಿಂದ ಕೊಟ್ಟೂರುವರೆಗೆ 4 ಸಾವಿರ ಬೈಕ್ ಹಾಗೂ 500 ಕಾರುಗಳ ರ‍್ಯಾಲಿ ನಡೆಯಲಿದೆ.
ಜ.28 ರಂದು ಬೆಳಿಗ್ಗೆ 8ಗಂಟೆಗೆ ದಾವಣಗೆರೆಯ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣಮಂಟಪದಲ್ಲಿ ಉಪಾಹಾರ ಬಳಿಕ ಬೈಕ್ ರ‍್ಯಾಲಿ ಆರಂಭಿಸಿ ಸಿರಿಗೆರೆ ತರಳಬಾಳು ಮಠಕ್ಕೆ ತೆರಳಿ, ಅಲ್ಲಿಂದ ಶ್ರೀಗಳೊಂದಿಗೆ ಕೊಟ್ಟೂರಿಗೆ ತೆರಳಲಾಗುವುದು.
- ಮಾರ್ಗದ ವಿವರ
- 1) ಸಿರಿಗೆರೆ ಐಕ್ಯಮಂಟಪ (ಬೆಳಿಗ್ಗೆ 10.30)
- 2) ಓಬವ್ವನಾಗತಿಹಳ್ಳಿ
- 3) ಸಿರಿಗೆರೆ ಕ್ರಾಸ್ (ಬೆಳಿಗ್ಗೆ 11.45)
- 4) ಗೌರಮ್ಮನಹಳ್ಳಿ ಕ್ರಾಸ್
- 5) ಕಲ್ಕುಂಟೆ ಕ್ರಾಸ್
- 6) ವಿಜಾಪುರ ಗೊಲ್ಲರಹಟ್ಟಿ
- 7) ವಿಜಾಪುರ
- 8) ಲಕ್ಷ್ಮೀಸಾಗರ
- 9) ಬೀರಾವರ ಕ್ರಾಸ್
- 10) ಸಿದ್ಧವ್ವನದುರ್ಗ (ಕೋಟೆ)
- 11) ಹೊಸಹಟ್ಟಿ
- 12) ಮುದ್ದಾಪುರ
- 13) ಯಳಗೋಡು ಕ್ರಾಸ್
- 14) ಹುಲ್ಲೇಹಾಳ್ – ಬಸ್ತಿಹಳ್ಳಿ
- 15) ಬಿದರಕೆರೆ (ಮಧ್ಯಾಹ್ನ 1.00)
- 16) ರಸ್ತೆಮಾಕುಂಟೆ
- 17) ಬಿಸ್ತುವಳ್ಳಿ
- 18) ಜಗಳೂರು (ಮಧ್ಯಾಹ್ನ 1.30)
- (ದಿದ್ದಿಗಿ ಗ್ರಾಮಸ್ಥರಿಂದ ಜಗಳೂರಿನ ತರಳಬಾಳು ಕೇಂದ್ರದಲ್ಲಿ ದಾಸೋಹ)
- 19) ಕೆಳಗೋಟೆ ಕ್ರಾಸ್
- 20) ಕೆಚ್ಚೇನಹಳ್ಳಿ (ಮಧ್ಯಾಹ್ನ 2.45)
- 21) ಹೊಸಕೆರೆ
- 22) ಲಕ್ಕಂಪುರ
- 23) ಸೊಕ್ಕೆ ಕ್ರಾಸ್
- 24) ಗಡಿಮಾಕುಂಟೆ
- 25) ಬೆನಕನಹಳ್ಳಿ
- 26) ಉಜ್ಜಿನಿ
- 27) ಕಾಳಾಪುರ ಕ್ರಾಸ್ (ಮಧ್ಯಾಹ್ನ 3.30)
- 28) ನಡುಮಾವಿನಹಳ್ಳಿ ಕ್ರಾಸ್
- 29) ಹಾರಕನಾಳ್ ಕ್ರಾಸ್
- 30) ಜಾಗಟಗೆರೆ ಕ್ರಾಸ್
- 31) ಹುಣಿಸೆಕಟ್ಟೆ ಕ್ರಾಸ್
- 32) ವಡ್ಢೇರಹಳ್ಳಿ ಕ್ರಾಸ್
- 33) ಕೊಟ್ಟೂರು (ಸಂಜೆ 4.30) (ಕೊಟ್ಟೂರಿನ ತರಳಬಾಳು ಹುಣ್ಣಿಮೆ ಮಂಟಪದ ಮುಂಭಾಗ – ಉಜ್ಜಿನಿ ಸರ್ಕಲ್ – ಜೋಳದ ಕೂಡ್ಲಿಗಿ ರಸ್ತೆ – ಶ್ರೀ ಜಗದ್ಗುರುಗಳವರ ಬಿಡಾರ.)



