Connect with us

Dvgsuddi Kannada | online news portal | Kannada news online

ಭಾರತ ಟೆಸ್ಟ್ ಇತಿಹಾಸದಲ್ಲಿಯೇ ಅತಿ ಕಡಿಮೆ ಮೊತ್ತಕ್ಕೆ ಆಲೌಟ್; 36 ವರ್ಷದಲ್ಲಿಯೇ ಹೀನಾಯ ಬ್ಯಾಟಿಂಗ್..!

ಪ್ರಮುಖ ಸುದ್ದಿ

ಭಾರತ ಟೆಸ್ಟ್ ಇತಿಹಾಸದಲ್ಲಿಯೇ ಅತಿ ಕಡಿಮೆ ಮೊತ್ತಕ್ಕೆ ಆಲೌಟ್; 36 ವರ್ಷದಲ್ಲಿಯೇ ಹೀನಾಯ ಬ್ಯಾಟಿಂಗ್..!

ಅಡಿಲೇಡ್: ಆಸ್ಟ್ರೇಲಿಯಾ ತಂಡದ ದಿಟ್ಟ ದಾಳಿಗೆ ತತ್ತರಿಸಿದ ಭಾರತ ತಂಡ ಇನ್ನೂ ಎರಡು ದಿನಗಳು ಬಾಕಿ ಇರುವಾಗಲೇ ಮೊದಲನೇ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಹೀನಾಯ ಸೋಲು ಕಂಡಿದೆ. ಈ  ಮೂಲಕ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ 0-1 ಹಿನ್ನಡೆ ಕಂಡಿದೆ.

4,9,2,0,4,0,8,4,0,4,1ಇದು ಶನಿವಾರ ಅಡಿಲೇಡ್ ಓವಲ್‌ ಕ್ರೀಡಾಂಗಣದಲ್ಲಿ ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ಗಳಿಸಿದ ವೈಯಕ್ತಿಕ ಸ್ಕೋರ್‌ಗಳು.11 ಬ್ಯಾಟ್ಸ್‌ಮನ್‌ಗಳು ಸೇರಿಸಿದ 36 ರನ್‌ಗಳು ಭಾರತವು ಟೆಸ್ಟ್‌ ಇತಿಹಾಸದಲ್ಲಿಯೇ ಗಳಿಸಿದ ಕನಿಷ್ಠ ಮೊತ್ತವಾಗಿ ದಾಖಲಾಯಿತು.

ಪಂದ್ಯದ ಎರಡನೇ ದಿನ ಆರ್. ಅಶ್ವಿನ್, ಜಸ್‌ಪ್ರೀತ್ ಬೂಮ್ರಾ ಮತ್ತು ಉಮೇಶ್ ಯಾದವ್ ಅವರ ಅಮೋಘ ಬೌಲಿಂಗ್‌ನಿಂದ ಪುಟಿದೆದ್ದಿದ್ದ ಭಾರತ ತಂಡವು ಮೂರನೇ ದಿನ ಊಟದ ವಿರಾಮಕ್ಕೆ ಇನ್ನೂ ಅರ್ಧ ಗಂಟೆ ಬಾಕಿಯಿರುವಾಗಲೇ ಬರಸಿಡಿಲು ಬಡಿಯಿತು. ಜೋಶ್ ಹ್ಯಾಜಲ್‌ವುಡ್ ಮತ್ತು ಪ್ಯಾಟ್ ಕಮಿನ್ಸ್‌ ಅವರ ‘ಬೌಲಿಂಗ್ ಪಾಲುದಾರಿಕೆ’ ಆಟವು ವಿರಾಟ್ ಪಡೆಯನ್ನು ಮಣ್ಣುಮುಕ್ಕಿಸಿತು.

36 ವರ್ಷಗಳ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ಇಂತಹದೊಂದು ಹೀನಾಯ ಬ್ಯಾಟಿಂಗ್ ಅನ್ನು ತಂಡವು ಪ್ರದರ್ಶಿಸಿದೆ. 1974ರಲ್ಲಿ ಇಂಗ್ಲೆಂಡ್ ಎದುರು ಲಾರ್ಡ್ಸ್‌ನಲ್ಲಿ ಗಳಿಸಿದ್ದ 42 ರನ್‌ಗಳು ಇಲ್ಲಿಯವರೆಗಿನ ಕನಿಷ್ಠ ಮೊತ್ತವಾಗಿತ್ತು. ಆಸ್ಟ್ರೇಲಿಯಾ ಎದುರು ಬ್ರಿಸ್ಬೆನ್‌ನಲ್ಲಿ 1947ರಲ್ಲಿ ನಡೆದಿದ್ದ ಪಂದ್ಯದಲ್ಲಿ 58 ರನ್, ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್ ಎದುರು 1952ರಲ್ಲಿ ಗಳಿಸಿದ್ದ 58 ರನ್. 1996ರಲ್ಲಿ ಡರ್ಬನ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು 66 ರನ್ ಮತ್ತು 1948ರಲ್ಲಿ ಆಸ್ಟ್ರೇಲಿಯಾ ಎದುರು ಮೆಲ್ಬರ್ನ್‌ನಲ್ಲಿ 67 ರನ್‌ ಗಳಿಸಿದ್ದ ಭಾರತ ಇವತ್ತು ಅದೆಲ್ಲವನ್ನೂ ಮೀರಿದ ಕಳಂಕವನ್ನು ತನ್ನ ಹೆಸರಿಗೆ ಬಳಿದುಕೊಂಡಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top