ಮುಂಬೈ: ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್ ಕೆ) ತಂಡದ ನಾಯಕ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದು, ಚೆನ್ನೈ ತಂಡದ ನೂತನ ನಾಯಕರಾಗಿ ರವೀಂದ್ರ ಜಡೇಜಾ ನೇಮಕ ಮಾಡಲಾಗಿದೆ. ಈ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ಟ್ವೀಟ್ ಮಾಡಿದ್ದು, ಎಂಎಸ್ ಧೋನಿ ಅವರ ತಂಡದ ನಾಯಕತ್ವವನ್ನು ರವೀಂದ್ರ ಜಡೇಜಾ ಅವರಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದೆ.
📑 Official Statement 📑#WhistlePodu #Yellove 💛🦁 @msdhoni @imjadeja
— Chennai Super Kings (@ChennaiIPL) March 24, 2022
2008ರಲ್ಲಿ ಆರಂಭವಾದ ಐಪಿಎಲ್ ಲೀಗ್ನ ಆರಂಭದಿಂದಲೂ ಸಿಎಸ್ಕೆ ನಾಯಕರಾಗಿರುವ ಧೋನಿ ಅವರಿಗೆ ಇದು ಐಪಿಎಲ್ ಕೊನೆಯ ಆವೃತ್ತಿ ಆಗಬಹುದು. ಅವರು ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ರವೀಂದ್ರ ಜಡೇಜಾ ಅವರು ಪ್ರಬುದ್ಧ ಆಟಗಾರನಾಗಿ ಹೊರಹೊಮ್ಮಿದ್ದು, ಅವರ ಆಟಕ್ಕೆ ಸಂಬಂಧಿಸಿದಂತೆ ಹೊಂದಾಣಿಕೆ ಮಾಡಿಕೊಳ್ಳುವ ರೀತಿ ಮತ್ತು ಪಂದ್ಯದ ಸಂದರ್ಭಗಳನ್ನು ಅರ್ಥ ಮಾಡಿಕೊಳ್ಳುವ ರೀತಿ ಅದ್ಭುತವಾಗಿದೆ. ಧೋನಿ ಬ್ರೇಕ್ ತೆಗೆದುಕೊಳ್ಳಲು ನಿರ್ಧರಿಸಿದರೆ ನಾಯಕತ್ವವನ್ನು ಜಡೇಜಾಗೆ ಹಸ್ತಾಂತರಿಸಿದರೆ ನಾನು ಆಶ್ಚರ್ಯಪಡುವುದಿಲ್ಲ ಎಂದು ಗವಾಸ್ಕರ್ ಅವರು ಸ್ಟಾರ್ ಸ್ಪೋರ್ಟ್ಸ್ನಲ್ಲಿ ಸಂದರ್ಶನದಲ್ಲಿ ಹೇಳಿದ್ದಾರೆ.



