ನವದೆಹಲಿ : ಶ್ರೀರಾಮಮಂದಿರ ಕಟ್ಟಲು ನಮ್ಮ ತಕರಾರಿಲ್ಲ. ಸುಪ್ರೀಂ ಕೋರ್ಟ್ ಆದೇಶದಂತೆ ಮಂದಿರ ಕಟ್ಟುದ್ದಾರೆ. ಆದರೆ, ವಿವಾದಿ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವುದಕ್ಕೆ ನಾನು ದೇಣಿಗೆ ನೀಡಲ್ಲ ಎಂದು ಹೇಳಿದ್ದೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನನ್ನ ಬಳಿಯೂ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಪಡೆಯಲು ಬಂದಿದ್ದರೂ, ವಿವಾದಿತ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಲು ಹಣ ಕೊಡುವುದಿಲ್ಲ ಎಂದು ಹೇಳಿದ್ದಾನೆ. ಅಯೋಧ್ಯೆಯಲ್ಲಿಯೇ ರಾಮ ಮಂದಿರ ಕಟ್ಟಬೇಕು ಅಂತೇನಿಲ್ಲ. ಬೇರೆ ಕಡೆ ಎಲ್ಲಿ ಬೇಕಾದರೂ ಕಟ್ಟಬಹುದಿತ್ತು. ಹೀಗಾಗಿ ರಾಮ ಮಂದಿರ ಕಟ್ಟೋದಕ್ಕೆ ದೇಣಿಗೆ ಕೊಡೋದಿಲ್ಲ. ಬೇರೆ ರಾಮ ಮಂದಿರಕ್ಕೆ ಕೊಡುವೆ ಎಂಬುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
,ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಕಟ್ಟೋದಕ್ಕೆ ದೇಣಿಗೆ ಕೊಡೋದಿಲ್ಲ. ನಮ್ಮೂರಲ್ಲಿ ಕಟ್ಟಲಿ ಕೊಡುವೆ. ಈ ಹಿಂದೆ ಇಲ್ಲಿಂದ ಇಟ್ಟಿಗೆ ಹಿಡಿದುಕೊಂಡು ಅಯೋಧ್ಯೆಗೆ ಹೋದ್ದರು. ಯಾರಾದ್ರೂ ಎಷ್ಟು ಬಂದಿದೆ ಎಂದು ಇದುವರೆಗೆ ಯಾರದರೂ ಹಣದ ಲೆಕ್ಕ ಕೊಟ್ಟಿದ್ದಾರಾ.? ಎಲ್ಲಿ ಹೋಯಿದು ಹಣ.? ಇದೆಲ್ಲ ರಾಮ, ಕೃಷ್ಣನ ಲೆಕ್ಕ ಎಂದರು.