ಬೆಂಗಳೂರು: ದಿನಬಳಕೆಯ ಅಗತ್ಯ ವಸ್ತುಗಳ ದರವು ದಿನ ಕಳೆದಂತೇ ಹೆಚ್ಚುತ್ತಿದೆ. ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ, ಜನರಿಗೆ ಮುಖ ಗುರುತು ಸಿಗಬಾರದೆಂದು ಪ್ರಧಾನಿ ನರೇಂದ್ರ ಮೋದಿ ಗಡ್ಡ ಬೆಳೆಸಿಕೊಂಡಿದ್ದಾರ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದಾವರು, ಸುಳ್ಳಿಗೆ ಪರ್ಯಾಯ ಪದವೇ ನರೇಂದ್ರ ಮೋದಿ. ಅತೀ ಕೆಟ್ಟದಾದ ಸರಕಾರವು ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಮೋದಿಯ ಹೆಸರಿನಲ್ಲಿ ಘೋಷಣೆ ಕೂಗುತ್ತಾ ಅವರನ್ನು ಅಧಿಕಾರಕ್ಕೇರಿಸಿದ ಯುವಜನತೆಗೆ ಮೋದಿ ಮೋಸ ಮಾಡಿದ್ದಾರೆ.ಅವರ ಬಣ್ಣವನ್ನು ಕಾಂಗ್ರೆಸ್ ಪಕ್ಷವು ಬಯಲು ಮಾಡಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.