ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಲು ಒಕ್ಕೂಟದಿಂದ ಸಿಹಿ ಸುದ್ದಿ; ರೈತರಿಂದ ಖರೀದಿಸುವ ಹಾಲಿನ ದರ 2. ರೂ. ಹೆಚ್ಚಳ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ಶಿವಮೊಗ್ಗ: ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಒಕ್ಕೂಟವು ತನ್ನ ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸಿ ಹಾಲು (milk) ಖರೀದಿ ದರವನ್ನು ಕಾಲಕಾಲಕ್ಕೆ ಪರಿಷ್ಕರಿಸುತ್ತಿದ್ದು, ಬೇಸಿಗೆ ಹಂಗಾಮಿನಲ್ಲಿ ಹೈನುರಾಸುಗಳ ನಿರ್ವಹಣಾ ವೆಚ್ಚ ಅಧಿಕಾರವಾಗುವುದರಿಂದ ಉತ್ಪಾದನಾ ವೆಚ್ಚ ಹೆಚ್ಚಳವಾಗಿ ಲಾಭಾಂಶ ಕಡಿಮೆ ಆಗುವುದರಿಂದ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸಿ, ಉತ್ತೇಜಿಸುವ ಸಲುವಾಗಿ ದರ ಪರಿಷ್ಕರಿಸಲಾಗಿದೆ.

ಒಕ್ಕೂಟದ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ರೈತರಿಂದ ಖರೀದಿಸುವ ಹಾಲು ಖರೀದಿ ದರವನ್ನು ಪ್ರತಿ ಕೆ.ಜಿ.ಗೆ ರೂ. 2.00 ಹೆಚ್ಚಿಸಿ (milk price hike) ಪರಿಷ್ಕರಿಸಲು ಒಕ್ಕೂಟದ ಅಧ್ಯಕ್ಷ ಹೆಚ್.ಎನ್. ವಿದ್ಯಾಧರ ಅದ್ಯಕ್ಷತೆಯಲ್ಲಿ ಜ.31 ರಂದು ನಡೆದ ಒಕ್ಕೂಟದ 453ನೇ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಿದೆ.

ಒಕ್ಕೂಟದಿಂದ ಸಂಘಗಳಿಗೆ ಪ್ರಸ್ತುತ ಎಫ್‌ಎಟಿ 4.0%, ಎಸ್‌ಎನ್‌ಎಫ್ 8.50% ಇರುವ ಪ್ರತಿ ಕೆ.ಜಿ.ಹಾಲಿಗೆ 32.09 ರೂ. ಪರಿಷ್ಕೃತ ದರ 34.18 ರೂ.ಸಂಘದಿಂದ ಉತ್ಪಾದಕರಿಗೆ ಪ್ರಸ್ತುತ ಎಫ್‌ಎಟಿ4.0%, ಎಸ್‌ಎನ್‌ಎಫ್ 8.50% ಇರುವ ಪ್ರತಿ ಲೀ. ಹಾಲಿಗೆ 30.13 ರೂ. ಪರಿಷ್ಕೃತ ದರ 32.22 ರೂ.ಪರಿಷ್ಕೃತ ದರು ದಿ: 01/02/2025 ರಿಂದ ದಿ:31/03/2025ರವರೆಗೆ ಜಾರಿಯಲ್ಲಿರುತ್ತದೆ.

ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಹೆಚ್.ಎನ್. ವಿದ್ಯಾಧರ, ಉಪಾಧ್ಯಕ್ಷರಾದ ಚೇತನ್ ಎಸ್ ನಾಡಿಗರ , ನಿರ್ದೇಶಕರುಗಳಾದ ಆರ್.ಎಂ.ಮಂಜುನಾಥ ಗೌಡ, ಡಿ.ಆನಂದ, ಜಗದೀಶಪ್ಪ ಬಣಕಾರ್, ಟಿ.ಶಿವಶಂಕರಪ್ಪ, ಜಿ.ಪಿ.ರೇವಣಸಿದ್ದಪ್ಪ, ಹೆಚ್.ಕೆ.ಬಸಪ್ಪ, ಹೆಚ್.ಬಿ.ದಿನೇಶ್, ಬಿ.ಜಿ.ಬಸವರಾಜಪ್ಪ ಬಿ.ಆರ್.ರವಿಕುಮಾರ್, ಬಿ.ಸಿ.ಸಂಜೀವ ಮೂರ್ತಿ, ಟಿ.ಎಸ್.ದಯಾನಂದ ಗೌಡ್ರು, ಜಿ.ಬಿ.ಶೇಖರಪ್ಪ, ಎಸ್. ಕುಮಾರ್, ನಾಗಭೂಷಣ (DRCS ಸಹಕಾರ ಸಂಘಗಳ ಜಂಟಿ ನಿಬಂಧಕರು, ಬೆಂಗಳೂರು ಪ್ರಾಂತ) ಇವರ ಪ್ರತಿನಿಧಿ, ರಾಜಶೇಖರ ಮೂರ್ತಿ.ಎಂ ನಿರ್ದೇಶಕರು (ಗುಣಭರವಸೆ) ಕ.ಹಾ.ಮ, ಡಾ॥ ಬಾಬುರತ್ನ ಉಪ ನಿರ್ದೇಶಕರು ಪ ಸಂ ಪ್ರತಿನಿಧಿ,ಡಾ॥ ವಿನಯ್‌ಕುಮಾರ್ ಹಾಗೂ ವ್ಯವಸ್ಥಾಪಕ ನಿರ್ದೇಶರಾದ ಎಸ್.ಜಿ.ಶೇಖರ್ ಉಪಸ್ಥಿತರಿದ್ದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *