ಚೆನ್ನೈ: ಬಹುಭಾಷಾ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಅಂತ್ಯಕ್ರಿಯೆ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ತಾಮರೈಪಕ್ಕಂನ ಫಾರ್ಮ್ ಹೌಸ್ ನಲ್ಲಿ ನಡೆಯಿತು.
ತಮಿಳುನಾಡು ಪೊಲೀಸರು ಗೌರವವಂದನೆ ಸಲ್ಲಿಸಿದರು. ಎಸ್.ಪಿ.ಬಿ ಅವರ ಪುತ್ರ ಎಸ್.ಪಿ.ಚರಣ್ ಅವರು ಅಂತಿಮ ವಿಧಿವಿಧಾನ ನಡೆಸಿದರು. ಧಾರ್ಮಿಕ ಮಂತ್ರಗಳನ್ನು ಈ ಸಂದರ್ಭದಲ್ಲಿ ಪಠಿಸಲಾಯಿತು. ಪೊಲೀಸರ ಪಥ ಸಂಚಲನದೊಂದಿಗೆ ಶವವನ್ನು ಅಂತ್ಯಕ್ರಿಯೆ ಸ್ಥಳಕ್ಕೆ ತರಲಾಯಿತು.
Tamil Nadu: Last rites of singer SP Balasubrahmanyam being performed at Thamaraipakkam village of Thiruvallore district.
SP Balasubrahmanyam passed away yesterday. pic.twitter.com/jEdERZAzNV
— ANI (@ANI) September 26, 2020
ಅಂತ್ಯಕ್ರಿಯೆ ನಡೆದ ತಿರುವಳ್ಳುವರ್ ಜಿಲ್ಲೆಯಲ್ಲಿರುವ ಫಾರ್ಮ್ ಹೌಸ್ ಬಳಿ ಎಸ್.ಪಿ.ಬಿ. ಅವರ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗಿಯಾಗಿದ್ದರು. ಮುಂಜಾಗ್ರತೆಯಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.
ಎಸ್.ಪಿ.ಬಿ ಅವರು ಅನಾರೋಗ್ಯಕ್ಕೆ ಒಳಗಾದಗಿನಿಂದ ಎಂ.ಜಿ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಶುಕ್ರವಾರ ನಿಧನ ಹೊಂದಿದ್ದರು.



