ಹೊಸದಿಲ್ಲಿ: ಉಕ್ರೇನ್ ಮೇಲಿನ ರಷ್ಯಾ ದಾಳಿ ಖಂಡಿಸುವ ತಕ್ಷಣ ಷರತ್ತು ರಹಿತವಾಗಿ ದಾಳಿ ನಿಲ್ಲಿಸಬೇಕು ಹಾಗೂ ಉಕ್ರೇನ್ ಗಡಿಯಿಂದ ಸೇನಾ ವಾಪಾಸು ಪಡೆಯಬೇಕು ಒತ್ತಾಯಿಸುವ ನಿರ್ಣಯದ ಮೇಲಿನ ಮತದಾನದಿಂದ ಭಾರತ, ಚೀನಾ ಹಾಗೂ ಪಾಕಿಸ್ತಾನ ಸೇರಿದಂತೆ 35 ದೇಶಗಳು ಹೊರಗುಳಿದಿವೆ.
ಈ ನಿರ್ಣಯಕ್ಕೆ ಬದ್ಧವಾಗುವ ಅಗತ್ಯವಿಲ್ಲದಿದ್ದರೂ, 193 ಸದಸ್ಯದೇಶಗಳ ಅಭಿಪ್ರಾಯವನ್ನು ಬಿಂಬಿಸುವ ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ 141 ಮತಗಳು ನಿರ್ಣಯದ ಪರವಾಗಿ ಚಲಾವಣೆಯಾದವು. ಮೂರನೇ ಎರಡು ಬಹುಮತದೊಂದಿಗೆ ಅಂಗೀಕರಿಸಲಾಯಿತು.
ಭಾರತದ ನೆರೆರಾಷ್ಟ್ರಗಳಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಮತದಾನದಿಂದ ದೂರ ಉಳಿದಿದ್ದು, ನೇಪಾಳ, ಮಾಲ್ಡೀವ್ಸ್, ಭೂತಾನ್ ಮತ್ತು ಅಪ್ಘಾನಿಸ್ತಾನ ದೇಶಗಳು ರಷ್ಯಾ ವಿರುದ್ಧದ ನಿರ್ಣಯದ ಪರವಾಗಿ ಮತ ಹಾಕಿವೆ. ಎರಡು ದೇಶಗಳನ್ನು ತಲುಪಲು ಅನುವಾಗುವಂತೆ ಮತ್ತು ಪರಸ್ಪರ ಸಂಧಾನ ಹಾಗೂ ರಾಜತಾಂತ್ರಿಕತೆಯನ್ನು ಉತ್ತೇಜಿಸುವ ನಿಲುವಿಗೆ ಬದ್ಧವಾಗಿ ಮತದಾನದಿಂದ ದೂರ ಉಳಿದಿದ್ದಾಗಿ ಭಾರತ ತಿಳಿಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿಯೂ ಸಹ ಭಾರತ, ಚೀನಾ ಹಾಗೂ ಯುಎಇ ಮತದಾನದಿಂದ ದೂರ ಉಳಿದಿದ್ದವು.