ಡಿವಿಜಿ ಸುದ್ದಿ, ಬೆಂಗಳೂರು: ಆರ್ ಆರ್ ನಗರ ಉಪ ಚುನಾವಣೆಯಲ್ಲಿ ಪ್ರಚಾರಕ್ಕೆ ಸ್ಯಾಂಡಲ್ ವುಡ್ ನ ಡಿಬಾಸ್ ಖ್ಯಾತಿಯ ದರ್ಶನ್ ಇಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಪ್ರಚಾರ ನಡೆಸಲಿದ್ದಾರೆ.
ಪ್ರಚಾರಕ್ಕೂ ಮುನ್ನ ರಾಜರಾಜೇಶ್ವರಿ ನಗರದಲ್ಲಿ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿ ಪಕ್ಷ, ವ್ಯಕ್ತಿ ಮುಖ್ಯವಲ್ಲ. ಮುನಿರತ್ನ ಮಾನವೀಯತೆಯ ಗುಣ ನೋಡಿ ಪ್ರಚಾರಕ್ಕೆ ಹೋಗುತ್ತಿದ್ದೇನೆ. ಮುನಿರತ್ನ ಎಲ್ಲಿಯಲ್ಲಿ ಪ್ರಚಾರ ಮಾಡು ಅಂತಾರೋ ಅಲ್ಲಿ ಪ್ರಚಾರ ಮಾಡುತ್ತೇವೆ ಎಂದರು.

ಪ್ರಪಂಚದಲ್ಲಿ ಏನು ಆಗಿದೆ ಎಂಬುದು ಎಲ್ಲರಿಗೂ ಗೊತ್ತು. ಈ ವೇಳೆ ಮುನಿರತ್ನ ತೋರಿದ ಮಾನವೀಯತೆ ನೋಡಿ ಪ್ರಚಾರಕ್ಕೆ ಹೋಗುತ್ತಿದ್ದೇನೆ. ಮುನಿರತ್ನ ಇಲ್ಲಿವರೆಗೆ ಏನು ಮಾಡಿದ್ದಾರೆ ಎನ್ನುವುದಕ್ಕಿಂತ ಲಾಕ್ ಡೌನ್ ಸಮಯದಲ್ಲಿ ಪ್ರತಿ ಮನೆ ಮನೆಗೆ ರೇಷನ್ ನೀಡಿದ್ದಾರೆ.
ಕೈಯಲ್ಲಿ ಲಕ್ಷ ಲಕ್ಷ ಇದ್ದವರೋ ಕೂಡ ಕೊರೊನಾ ವೇಳೆ ಕ್ಯೂನಲ್ಲಿ ನಿಂತು ರೇಷನ್ ತಗೆದುಕೊಂಡಿದ್ಧಾರೆ. ಇಂತಹ ಸಂಕಷ್ಟ ಸಮಯದಲ್ಲಿ ಮುರತ್ನ ಆರ್ ಆರ್ ನಗರದಲ್ಲಿ ಸಾಕಷ್ಟು ಸಹಾಯ ಮಾಡಿದ್ದಾರೆ. ಅವರು ದೊಡ್ಡ ನಿರ್ಮಾಪಕ, ನಿರ್ದೇಶಕ, ಶಾಸಕ ಆಗಿರಬಹುದು. ಇದೆಲ್ಲಕ್ಕಿಂತ ಕೊರೊನಾ ಸಂದರ್ಭದಲ್ಲಿ ದೊಡ್ಡ ದಾಸೋಹವನ್ನು ಮಾಡಿದ್ದಾರೆ. ಇದು ಅವರ ದೊಡ್ಡ ಗುಣ. ಈ ಮಾನವೀಯತೆ ಗುಣಕ್ಕಾಗಿ ಅವರ ಪರ ಪ್ರಚಾರ ನಡೆದುತ್ತಿದ್ದೇನೆ ಎಂದರು.



