ಡಿವಿಜಿ ಸುದ್ದಿ, ಬೆಂಗಳೂರು: ರಾಜರಾಜೇಶ್ವರಿ ನಗರಕ್ಕೆ ಇಂದು ಉಪ ಚುನಾವಣೆ ನಡೆಯುತ್ತಿದ್ದು, ನಟ ದರ್ಶನ್, ದಿಗಂತ್, ಪ್ರೇಮ್ , ಅಮೂಲ್ಯ , ಹಿರಿಯ ನಟ ಅವಿನಾಶ್ ಸೇರಿದಂತೆ ಅನೇಕ ಸ್ಟಾರ್ ನಟ-ನಟಿಯರು ಮತದಾನ ಮಾಡಿದರು.
ರಾಜರಾಜೇಶ್ವರಿ ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ನಿರ್ಮಾಪಕ, ಮಾಜಿ ಶಾಸಕ ಮುನಿರತ್ನ, ಕಾಂಗ್ರೆಸ್ ನಿಂದ ಡಿ.ಕೆ. ರವಿ ಪತ್ನಿ ಕುಸುಮಾ, ಜೆಡಿಎಸ್ ನಿಂದ ಕೃಷ್ಣಮೂರ್ತಿ ಕಣದಲ್ಲಿ ಇದ್ದಾರೆ. ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದ್ದು, ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ.
ಮುನಿರತ್ನ ಪರ ನಟ ದರ್ಶನ್, ಅಮೂಲ್ಯ ಪ್ರಚಾರ ಮಾಡಿದ್ದು, ಭರ್ಜರಿ ರೋಡ್ ಶೋ ಮೂಲಕ ಬೆಳಗ್ಗೆಯಿಂದ ರಾತ್ರಿ 10 ಗಂಟೆ ವರೆಗೆ ಪ್ರಚಾರದಲ್ಲಿ ಭಾಗಿಯಾಗಿದ್ದರು.



