ಬೆಂಗಳೂರು: ಮಹಾನಾಯಕ ಡಿ.ಕೆ. ಶಿವಕುಮಾರ್ ಅವರೇ ನೈತಿಕತೆ ಇದ್ರೆ ರಾಜೀನಾಮೆ ನೀಡಿ ಎಂದು ಬಿಜೆಪಿ ಟ್ವೀಟ್ ಮೂಲಕ ಆಗ್ರಹಿಸಿದೆ.
ಎಲ್ಲವನ್ನೂ ತಾನೇ ಮುಂದೆ ನಿಂತು ಮಾಡಿಸುತ್ತಾರೆ. ಸದನದಲ್ಲಿ ಬೊಬ್ಬಿರಿಯುತ್ತಾರೆ, ಸುಭಗನಂತೆ ನಟಿಸುತ್ತಾರೆ. ಮಹಾನಾಯಕ ಡಿ ಕೆ ಶಿವಕುಮಾರ್ ಅವರೇ, ನಿಮಗೆ ಸ್ವಲ್ಪವಾದರೂ ನೈತಿಕತೆ ಇದ್ದರೆ ದಯವಿಟ್ಟು ರಾಜೀನಾಮೆ ಕೊಟ್ಟುಬಿಡಿ. ಒತ್ತೆಯಲ್ಲಿಟ್ಟುಕೊಂಡಿರುವ ಸಂತ್ರಸ್ತೆಯನ್ನು ಬಿಟ್ಟುಬಿಡಿ, ತನಿಖೆಗೆ ಸಹಕರಿಸಿ ಒತ್ತಾಯಿಸಿದೆ.
ರಾಜೀನಾಮೆ ನೀಡಲು ಇನ್ನೆಷ್ಟು ಕಾಲ ಬೇಕು ಮಾನ್ಯ ಡಿ ಕೆ ಶಿವಕುಮಾರ್ ಅವರೇ!?. ನೇರವಾಗಿ ಆರೋಪ ಮಾಡಿದ್ದಾರೆ. ರಾಜಕೀಯ ಲಾಭಕ್ಕಾಗಿ ಸಂತ್ರಸ್ಥೆಯನ್ನು ಬಳಸಿಕೊಂಡ ಆರೋಪ ನಿಮ್ಮ ಮೇಲೆ ಇದೆ. ಇಷ್ಟೆಲ್ಲಾ ಮಾಡಿಯೂ ಸದನದಲ್ಲಿ ಹೇಗೆ ಮುಖ ಇಟ್ಟುಕೊಂಡು ಸಿಡಿ ವಿಚಾರವಾಗಿ ಮಾತನಾಡಿದ್ದೀರಿ? ತಕ್ಷಣವೇ ರಾಜೀನಾಮೆ ನೀಡಿ ಎಂದಿದೆ ಬಿಜೆಪಿ.



