ದಾವಣಗೆರೆ: ಕೆ.ಯು.ಐ.ಡಿ.ಎಫ್.ಸಿ. ವತಿಯಿಂದ ತುರ್ತು ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಫೆ.17 ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಪಿ.ಜೆ. ಫೀಡರ್‍ನ ವ್ಯಾಪ್ತಿಯ ಮೋತಿ ವೀರಪ್ಪ ಕಾಲೇಜ್ ಹಿಂಭಾಗ, ಸರ್ ಎಂ.ವಿಶ್ವೇಶ್ವರಯ್ಯ ಪಾರ್ಕ್, ಬ್ಲಡ್ ಬ್ಯಾಂಕ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ದಾವಣಗೆರೆಯಿಂದ 66 ಕೆವಿ ಮಾರ್ಗಗಳ ತುರ್ತು ನಿರ್ವಹಣಾ ಕಾಮಗಾರಿ ನಿರ್ವಹಿಸುವುದರಿಂದ ನಾಳೆ ಬೆಳ್ಳಗ್ಗೆ 10 ರಿಂದ ಸಂಜೆ 6 ಗಂಟೆ ವರೆಗೆ ವಿದ್ಯತ್ ವ್ಯತ್ಯವಾಗಲಿದೆ. ಆವರಗೆರೆ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಆವರಗೆರೆ, ಬಾಡಾಕ್ರಾಸ್, ಉತ್ತಮ್‍ಚಂದ್ ಲೇಔಟ್, ಆಂಜನೇಯಕಾಟನ್ ಮಿಲ್, ಹೊನ್ನೂರು, ಮಲ್ಲಶೆಟ್ಟಿಹಳ್ಳಿ, ಕರೀಲಕ್ಕೆನಹಳ್ಳಿ, ಬಸಾಪುರ, ಚಿಕ್ಕನಹಳ್ಳಿ, ಐಗೂರು, ಲಿಂಗದಹಳ್ಳಿ, ವಡ್ಡಿನಹಳ್ಳಿ, ಚಟ್ಟೋಬನಹಳ್ಳಿ ಗ್ರಾಮಗಳಲ್ಲಿ ಮತ್ತು 66/11ಕೆವಿ ಕಾಡಜ್ಜಿ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಕಾಡಜ್ಜಿ, ನಾಗರಕಟ್ಟೆ, ರಾಂಪುರ, ಬಸವನಾಳ್, ಬೇತೂರು ಮತ್ತು ಪುಟ್ಟಗನಾಳ್ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.