ಡಿವಿಜಿ ಸುದ್ದಿ, ದಾವಣಗೆರೆ: ಮಹಾನಗರ ಪಾಲಿಕೆ ವತಿಯಿಂದ ಎಸ್‍ವಿಟಿ ಫೀಡರ್‍ನಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ನಾಳೆ (ನ. 05) ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 01 ರವರೆಗೆ ವಿದ್ಯುತ್ ವ್ಯತ್ಯವಾಗಲಿದೆ.
ನಗರದ ಎಂ.ಸಿ.ಸಿ. ಬಿ-ಬ್ಲಾಕ್, ಡೆಂಟಲ್‍ಕಾಲೇಜ್ ರಸ್ತೆ, ಆಂಜನೇಯ ಬಡಾವಣೆ 1,2 ಮತ್ತು 3ನೇ ಕ್ರಾಸ್, ಬಿ.ಡಿ.ಟಿ. ಕಾಲೇಜ್ ಹಾಗೂ ಸುತ್ತಮುತ್ತಲಿನ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಉಪವಿಭಾಗದ ಎಇಇ ರಾಮಚಂದ್ರಪ್ಪ ತಿಳಿಸಿದ್ದಾರೆ.



