ಡಿವಿಜಿ ಸುದ್ದಿ, ದಾವಣಗೆರೆ: ಯರಗುಂಟೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಶನೇಶ್ವರ, ಎನ್‍ಜೆ ವೈ, ಬಾತಿ, ಸತ್ಯನಾರಾಯಣ ಮತ್ತು ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಬಸವೇಶ್ವರ ಹಾಗೂ ಎಸ್.ಆರ್.ಎಸ್. ಸ್ವೀಕರಣಾ ಕೇಂದ್ರ ದಾವಣಗೆರೆಯಿಂದ ಹೊರಡುವ ಸರಸ್ವತಿ ಫೀಡರ್ ಗಳಲ್ಲಿ ತುರ್ತು ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ನಾಳೆ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಶನೇಶ್ವರ ಫೀಡರ್ ವ್ಯಾಪ್ತಿಯ ಜಿ.ಎಂ.ಐ.ಟಿ.ಕಾಲೇಜು, ದೇವರಾಜ ಅರಸ್ ಬಡಾವಣೆ, ಪೂಜಾ ಹೋಟೆಲ್, ಸಾಯಿ ಹೋಟೆಲ್, ಕೋರ್ಟ್ ಸುತ್ತ ಮುತ್ತ, ಗಿರಿಯಪ್ಪ ಲೇಔಟ್, ಪಿಬಿ. ರಸ್ತೆ, ಸಂಗೊಳ್ಳಿ ರಾಯಣ್ಣ ಸರ್ಕಲ್. ಎನ್‍ಜೆ ವೈ, ಬಾತಿ ಹಾಗೂ ಸತ್ಯನಾರಾಯಣ ಫೀಡರ್ ವ್ಯಾಪ್ತಿಯ ಗ್ರಾಮಾಂತರ ಪ್ರದೇಶಗಳಾದ ದೊಡ್ಡಬಾತಿ, ಹಳೇಬಾತಿ, ನೀಲಾನಹಳ್ಳಿ ಸುತ್ತಮುತ್ತ ಪ್ರದೇಶ.
ಬಸವೇಶ್ವರಫೀಡರ್ ನ ಕರ್ನಾಟಕ ಬ್ಯಾಂಕ್ ಸುತ್ತಮುತ್ತ, ಅಂಗವಿಕಲರ ಶಾಲೆ, ಭ್ಟ್ರಷ್ಟಾಚಾರ ನಿಗ್ರಹ ದಳದ ಕಚೇರಿಗಳು, ಅಥಣಿ ಕಾಲೇಜ್ ರಸ್ತೆ, ಶಾರದಾಂಭ ವೃತ್ತ, ಆಫೀಸರ್ಸ್‍ಕ್ಲಬ್, ಎಮ್.ಬಿ.ಎ. ಕಾಲೇಜ್ ಹಾಗೂ ಸುತ್ತಮುತ್ತಲ ಪ್ರದೇಶಗಳು. ಸರಸ್ವತಿ ಫೀಡರ್ ವ್ಯಾಪ್ತಿಯ ಭೂಮಿಕನಗರ ಮತ್ತುಸುತ್ತ ಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.



