ಮಂಗಳೂರು: ದೇಶದ ಸಂಪತ್ತಿನಲ್ಲಿ ಮುಸ್ಲಿಂರಿಗೂ ಪಾಲು ಕೊಡಬೇಕು. ಇನ್ನೊಮ್ಮೆ ಅಧಿಕಾರಕ್ಕೆ ಬಂದರೆ ಹತ್ತು ಸಾವಿರ ಕೋಟಿ ರೂಪಾಯಿ ನೀಡುತ್ತೇನೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.
ಮಂಗಳೂರಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕರದಲ್ಲಿ ಅಲ್ಪಸಂಖ್ಯಾತರಿಗದ್ದ ಅನುದಾನದಲ್ಲೂ ಕಡಿಮೆ ಮಾಡಿದ್ದಾರೆ. ಬಿಜೆಪಿಯವರು ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಣೆ ಮಾಡುತ್ತಿಲ್ಲ. ಸಂವಿಧಾನದ ಬದಲಾವಣೆ ಬಗ್ಗೆ ಅನಂತ ಕುಮಾರ್ ಹೆಗಡೆ ಹೇಳಿದ್ದಾರೆ. ಅವರು, ಗ್ರಾಮ ಪಂಚಾಯತ್ ಸದಸ್ಯ ನಾಗುವುದಕ್ಕೂ ನಾಲಾಯಕ್ ಎಂದು ಹೇಳಿದ್ದಾರೆ.
SFI ಮತ್ತು PFI ಎರಡೂ ಒಂದೇ. SDPI ವರ ಮಾತುಗಳನ್ನು ಕೇಳೋಕೆ ಹೋಗಬೇಡಿ. ಇವರು ಬಿಜೆಪಿಗೆ ಹಿಂದುಗಡೆಯಿಂದ ಸಪೋರ್ಟ್ ಮಾಡುವವರು. ಬಿಹಾರದ ಚುನಾವಣೆಯಲ್ಲೂ ಇವರಿಂದ ಬಿಜೆಪಿಗೆ ಲಾಭವಾಯಿತು. ಮುಸ್ಲಿಂ ರ ಓಟನ್ನು ಒಡೆಯುವಂತಹ ಹುನ್ನಾರ ಮಾಡುತ್ತಿದ್ದಾರೆ. ಈ ಹುನ್ನಾರಕ್ಕೆ ಯಾರೂ ಕೈ ಜೋಡಿಸಬಾರದು. ಬೆಂಗಳೂರು ಗಲಭೆ ಸಂಧರ್ಭದಲ್ಲಿ SDPI, PFI ಬ್ಯಾನ್ ಅಂತಾ ಹೇಳಿದ್ರು. ಸೂಕ್ತ ದಾಖಲೆಯಿದ್ದರೆ ಬ್ಯಾನ್ ಮಾಡಬೇಕು ಎಂದು ಸವಾಲು ಹಾಕಿದ್ದಾರೆ.



