ಡಿವಿಜಿ ಸುದ್ದಿ, ಬೆಂಗಳೂರು: ಆರ್ ಆರ್ ನಗರ ಉಪ ಚುನಾವಣೆಯಲ್ಲಿ ಕಾಂಗ್ರೆಸ್- ಬಿಜೆಪಿ ನಾಯಕರ ನಡುವೆ ಟಾಕ್ ವಾರ್ ಶುರುವಾಗಿದೆ. ಡಿಕೆ ಶಿವಕುಮಾರ್ ಆಟ ಕನಕಪುರಕ್ಕೆ ಮಾತ್ರ ಸಿಮೀತ. ಅದು ಆರ್ ಆರ್ ನಗರದಲ್ಲಿ ನಡೆಯಲ್ಲ. ಈ ಸಲ ಬಂಡೆ ಪುಡಿ ಮಾಡ್ತೀವಿ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು. ಇದಕ್ಕೆ ಕೌಂಟರ್ ಕೊಟ್ಟ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ , ಬಂಡೆ ಪುಡಿ ಮಾಡಿ ನೋಡೋಣ ಎಂದರು.
ಆರ್ ಆರ್ ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಆರ್. ಅಶೋಕ್, ಡಿ.ಕೆ. ಶಿವಕುಮಾರ್ ಆಟ ಕನಕಪುರಕ್ಕೆ ಮಾತ್ರ ಸೀಮೀತ. ಆರ್ ಆರ್ ನಗರದಲ್ಲಿ ಬಂಡೆ ಆಟ ನಡೆಯುವುದಿಲ್ಲ. ಇಲ್ಲಿ ಕಲ್ಲು, ಬಂಡೆ ಯಾವುದು ಇಲ್ಲ. ಇಲ್ಲಿ ಒಳ್ಳೆ ಭೂಮಿ, ವಿದ್ಯಾವಂತರು ನಾಗರಿಕರಿದ್ದಾರೆ. ಸಿಎಂ ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಾವು ಈ ಉಪ ಚುನಾವಣೆಯನ್ನು ಗೆಲ್ಲುತ್ತೇವೆ ಎಂದರು.
ಇನ್ನು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ನಾಮ ಪತ್ರ ಸಲ್ಲಿಕೆ ನಂತರ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಯಾರನ್ನು ಬೇಕಾದರೂ ಪುಡಿ ಮಾಡುವ ಶಕ್ತಿ ಬಿಜೆಪಿ ಅವರಿಗೆ ಕೊಟ್ಟಿದ್ದಾರೆ. ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದು, ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ. ಈ ಬಂಡೆ ಪುಡಿ ಮಾಡಿ ನೋಡೋಣ ಎಂದು ಪ್ರತಿ ಸವಾಲು ಹಾಕಿದ್ದಾರೆ.