ಮೈಸೂರು : ನಮ್ಮ ಪಕ್ಷದ ಹೆಸರು, ವರ್ಚಸ್ಸು, ಕಾಂಗ್ರೆಸ್ ಮೈತ್ರಿ ಸರ್ಕಾರದಿಂದಾಗಿ ಸರ್ವನಾಶವಾಯಿತು. ಬಿಜೆಪಿ ಜೊತೆ ಮೈತ್ರಿಯಿಂದಲೂ ನನಗೆ ಇಷ್ಟೊಂದು ದ್ರೋಹ ಆಗಿರಲಿಲ್ಲ. ನಾನು ಮತ್ತೊಂದು ಸಲ ಇಂತಹ ತಪ್ಪು ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿದ ಮಾತನಾಡಿದ ಅವರು, ಸಿದ್ಧರಾಮಯ್ಯ ಅವರ ಕುತಂತ್ರ ಹಾಗೂ ಹೆಚ್ ಡಿ ದೇವೇಗೌಡರ ಭಾವನಾತ್ಮಕ ಮಾತಿಗೆ ಬೆಲೆ ಕೊಟ್ಟು ಮೈತ್ರಿಗೆ ಒಪ್ಪಿಗೆ ನೀಡಿದ್ದೆ. ನಾನು ಅವರ ಮಾತನ್ನು ಕೇಳದೇ ಬಿಜೆಪಿ ಹೋಗಿದ್ದರೆ, ಈಗಲೂ ನಾನು ಮುಖ್ಯಮಂತ್ರಿ ಆಗುವ ಅವಕಾಶ ಇರುತ್ತಿತ್ತು ಎಂದು ಹೇಳಿದರು.
2006ರಲ್ಲಿ ಮುಖ್ಯಮಂತ್ರಿಯಾದಾಗ ರಾಜ್ಯದಲ್ಲಿ ನನಗೆ ಒಳ್ಳೆಯ ಹೆಸರು ಇತ್ತು. ಇದೇ ಕಾರಣದಿಂದಾಗಿ ನನ್ನನ್ನು ಈ ರಾಜ್ಯದ ಜನರು 12 ವರ್ಷ ಸಾಕಿದರು. ಆದರೆ, ನನ್ನ ಹೆಸರು ಕೆಡಿಸಲೆಂದು ಕಾಂಗ್ರೆಸ್ ಹೆಣೆದ ಬಲೆಯಲ್ಲಿ ಸಿಲುಕಿದೆ. ಜೊತೆಗೆ ದೇವೇಗೌಡರ ಮಾತು ಕೇಳಿ, ಕಾಂಗ್ರೆಸ್ ಜೊತೆ ಸೇರಿ ಮೈತ್ರಿ ಸರ್ಕಾರ ರಚಿಸಲಾಗಿತ್ತು. ಕಾಂಗ್ರೆಸ್ ಜತೆ ಮೈತ್ರಿ ಮುಖ್ಯಮಂತ್ರಿಯಾಗಿ ಹೆಸರು ಕೆಡಿಸಿಕೊಂಡಿದ್ದೇನೆ. ಮುಂದೆ ಇಂತಹ ಮತ್ತೊಂದು ತಪ್ಪು ಮಾಡುವುದಿಲ್ಲ ಎಂದು ತಿಳಿಸಿದರು.



