ಡಿವಿಜಿ ಸುದ್ದಿ, ಮೈಸೂರು: ಎಲೆಕ್ಷನ್ ಗೆದ್ರೆ ಮಾತ್ರ ಕೊರೊನಾ ಲಸಿಕೆನಾ..? ಗೆಲ್ಲದಿದ್ದರೆ ಜನರನ್ನು ಸಾಯಿಸ್ತೀರಾ ಎಂದು ಸ್ವ ಪಕ್ಷದ ಬಿಹಾರ ಚುನಾವಣೆ ಪ್ರಣಾಳಿಕೆ ವಿರುದ್ಧ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಕಿಡಿಕಾರಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಗೆದ್ದರೆ ಮಾತ್ರ ಲಸಿಕೆಯಾ? ಗೆಲ್ಲದಿದ್ದರೆ ಜನ ಸತ್ತು ಹೋಗಬೇಕಾ..? ಎಂದು ತಮ್ಮದೇ ಪಕ್ಷದ ಪ್ರನಾಳಿಕೆ ವಿರುದ್ಧ ಮಾತನಾಡಿದ್ದಾರೆ. ಯಾವುದೇ ರಾಜಕೀಯ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಇಂತಹ ಗಂಭೀರ ವಿಷಯ ಪ್ರಕಟಿಸಬಾರದು ಎಂದಿದ್ದಾರೆ.
ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯಗೆ ಗೌರವವಿಲ್ಲ. ಒಂದು ಕಡೆ ಡಿಕೆಶ, ಇನ್ನೊಂದೆಡೆ ಈಶ್ವರಪ್ಪ ಭಯ. ಇದರಿಂದ ಹತಾಶರಾಗಿ ವಿದೂಷಕನಂತೆ ವರ್ತಿಸುತ್ತಿದ್ದಾರೆ. ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಕಾಡು ಮನುಷ್ಯ ಎಂದಿದಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಈ ಮೂಲಕ ಕಾಡು ಕಾಪಾಡುವವರಿಗೆ, ಭಾಷೆಗೆ, ಜನತಂತ್ರ ವ್ಯವಸ್ಥೆಗೆ ಅಪಮಾನ ಮಾಡುತ್ತಿದ್ದೀರಿ. ನಿಮಗೆ ಏಕವಚನ, ಬಹುವಚನ ಗೊತ್ತಿಲ್ವಾ? ಪ್ರಬುದ್ಧತೆಯ ಪ್ರದರ್ಶನಕ್ಕಾಗಿ ಸಂಧಿ ಪಾಠ ಮಾಡುತ್ತಿದ್ದವರು ನೀವು.ಈಗ ನಿಮ್ಮ ಮಾತು, ವರ್ತನೆ ಪ್ರಬುದ್ಧವಾಗಿಲ್ಲ. ಿದನ್ನು ಕನ್ನಡಿಗರು ಕ್ಷಮಿಸಲ್ಲ ಎಂದು ಕುಟುಕಿದರು.