ದಾವಣಗೆರೆ: ಕಳೆದ 5 ತಿಂಗಳಿಂದ ಆನಾರೋಗ್ಯದಿಂದ ಸಿಎಂ ಕಚೇರಿಯಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಹೇಳಿಕೆ ನೀಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸಚಿವ ಕೆ. ಎಸ್. ಈಶ್ವರಪ್ಪ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವನೋ ಕುಡಿದು ಹೇಳಿಕೆ ನೀಡಿದ್ರೆ ಅದನ್ನು ಕೇಳೋಕೆ ಆಗುತ್ತಾ..? ನಮ್ಮವನೇ ಆಗಿರಲಿ ಯಾವನೇ ಆಗಿರಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಮಗೆ ನಾಳೆ ನಮ್ಮ ಹೊಸವರ್ಷ ಅಲ್ಲ. ಅದು ಬ್ರಿಟಿಷ್ ಕ್ಯಾಲಂಡರ್ ವರ್ಷ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಕುಡಿದು ಗಲಾಟೆ ಮಾಡುವಂತಿಲ್ಲ. ಕುಡಿದು ಗಲಾಟೆ ಮೋಜು ಮಸ್ತಿ ಅಂತ ಸಾರ್ವಜನಿಕರ ನೆಮ್ಮದಿಗೆ ಭಂಗ ತರಬಾರದು. ಅಂಥವರ ಮೇಲೆ ನಮ್ಮ ಸರ್ಕಾರ ಕಟ್ಟನಿಟ್ಟಿನ ಕ್ರಮ ಕೈಗೊಳ್ಳುತ್ತದೆ. ಪಾಕಿಸ್ಥಾನ ಜಿಂದಾಬಾದ್ ಎಂಬ ಹೇಳಿಕೆಯನ್ನು ಬಿಜೆಪಿ ಸರ್ಕಾರ ಬಗಳ ಗಂಭೀರವಾಗಿ ತಗೆದುಕೊಂಡಿದೆ. ಎಸ್ ಡಿಪಿಐ ನ ಅಹಂಕಾರ ಇನ್ನು ಕಡಿಮೆಯಾಗಿಲ್ಲ. ಈ ಹಿಂದಿನ ಸರ್ಕಾರಗಳು ನೀಡಿದ ಬೆಂಬಲ ಕಾರಣ ಸೊಕ್ಕು ಬಂದಿದೆ .ಬರಿ ನಾಲ್ಕೇ ಸೀಟು ಗೆದ್ದಿರೋಈ ರೀತಿ ಕೂಗಿರೋದು ದೇಶಕ್ಕೆ ಮಾಡಿದ ಅವಮಾನ.ಎಲ್ಲಾ ರಾಜಕೀಯ ಪಕ್ಷಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಈಗಾಗಲೆ ನಾಲ್ವರ ಮೇಲೆ ಎಪ್ ಐ ಆರ್ ಹಾಕಲಾಗಿದೆ ಎಂದು ತಿಳಿಸಿದರು.