ಡಿವಿಜಿ ಸುದ್ದಿ, ರಾಮನಗರ: ಸಿಬಿಐ ಅಧಿಕಾರಿಗಳಿಗೆ ನನ್ನ ಮಗನ ಮೇಲೆ ಪ್ರೀತಿ ಜಾಸ್ತಿ. ಹೀಗಾಗಿ ಪದೇ ಪದೇ ದಾಳಿ ನಡೆಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಾಯಿ ಗೌರಮ್ಮ ಕಿಡಿಕಾರಿದ್ದಾರೆ.
ಸಿಬಿಐ ದಾಳಿಗೆ ಪ್ರತಿಕ್ರಿಯಿಸಿದ ಅವರು, ಸಿಬಿಐ ಅಧಿಕಾರಿಗಳಿಗೆ ನನ್ನ ಮಗನ ಮೇಲೆ ಪ್ರೀತಿ ಜಾಸ್ತಿಯಾಗಿದೆ. ಹೀಗಾಗಿ ದಾಳಿ ಮಾಡುತ್ತಿದ್ದಾರೆ. ಎಲ್ಲಾ ಕಡೆ ದಾಳಿ ಮಾಡಿಕೊಳ್ಳಲಿ. ಅವರಿಗೆ ಏನು ಬೇಕು ಅದನ್ನು ತಗೆದುಕೊಂಡು ಹೋಗಲಿ. ಬೀರನ್ನು ಕೂಡ ತಗೆದುಕೊಂಡು ಹೋಗಲಿ. ಹೊಸ ಬೀರು ತಂದು ಕೊಡಲಿ.
ಡಿಕೆ ಶಿವಕುಮಾರ್ , ಜೊತೆಗೆ ನನ್ನನ್ನು ಬಂಧನ ಮಾಡಲಿ. ಟೈಮ್ ಟೈಮ್ ಗೆ ಊಟ ಕೊಟ್ಟರೆ ನಾನು ಜೈಲಿಗೆ ಹೋಗ್ತಿನಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನೆ, ಕಚೇರಿ ಸೇರಿದಂತೆ 15 ಕಡೆಗಳಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, 50 ಲಕ್ಷ ವಶ ಪಡಿಸಿಕೊಂಡಿದ್ದಾರೆ. ಕೆಲವೇ ಹೊತ್ತಿನಲ್ಲಿ ಬಂಧನ ಸಾಧ್ಯತೆ ಇದೆ.



