ದಾವಣಗೆರೆ: ಜಾತಿ ಗಣತಿ ಮೊದಲು ಬಿಡುಗಡೆಯಾಗಲಿ. ಆ ಮೇಲೆ ಅದರಲ್ಲಿ ಏನಿದೆ ನೋಡೋಣ. ವರದಿ ಬಿಡುಗಡಗೆ ಮುಂಚೆಯೇ ಮಾತನಾಡುವುದು ಸರಿಯಲ್ಲ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ ಬೆಂಗಳೂರಿನ ಅಖಿಲ ಭಾರತ ವೀರಶೈವ ಮಹಾಸಭಾದ ಸಭೆಯಲ್ಲಿ ಜಾತಿಗಣತಿ ವರದಿಗೆ ವಿರೋಧ ವ್ಯಕ್ತವಾಗಿದೆ. ಆದರೆ, ವರದಿ ಏನಿದೆಯೆಂದು ನೋಡೋಣ. ಈಗ ಒಬ್ಬೊಬ್ಬರದ್ದೂ ಒ೦ದೊ೦ದು ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಒಕ್ಕಲಿಗ, ಲಿಂಗಾಯತ ಸೇರಿ
ಹಲವಾರು ಜಾತಿಗಳು ವರದಿಗೆ ವಿರೋಧ ಮಾಡಿವೆ. ಹೀಗಾಗಿ ಮೊದಲು ಜಾತಿ ಗಣತಿ ವರದಿ ಬಿಡುಗಡೆಯಾಗಲಿ ಎಂದು ತಿಳಿಸಿದರು.
ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಬಗ್ಗೆ ಮಾಜಿ ಸಚಿವ ಎಚ್. ವಿಶ್ವನಾಥ್ ಹೇಳಿಕೆ ಬಗ್ಗೆ ಪ್ರತಿಕ್ರಿಸಿ, ವಿಶ್ವನಾಥ ಈಗ
ಯಾವ ಪಕ್ಷದಲ್ಲಿದ್ದಾರೆಂದು ಹರಿಹಾಯ್ದಿದ್ದಾರೆ. ಮಾಜಿ ಸಚಿವ ಎಚ್. ವಿಶ್ವನಾಥ ಒಬ್ಬ ಸಮಯ ಸಾಧಕರು. ಎಲ್ಲಾ ಪಕ್ಷಗಳನ್ನು ಅಡ್ಡಾಡಿಕೊಂಡು,ಈಗ ಯಾವ ಪಕ್ಷದಲ್ಲಿದ್ದಾರೆ? ಶಾಮನೂರು ಶಿವಶಂಕರಪ್ಪನವರ ಬಗ್ಗೆ ವಿಶ್ವನಾಥ್ ಗೆ ಏನು ಗೊತ್ತಿದೆ ಎಂದು ಕಿಡಿಕಾರಿದರು.
ಶಾಮನೂರು ಶಿವಶಂಕರಪ್ಪಗೆ ಮೊದಲು ಓದಕ್ಕೆ ಬರುತ್ತಾ..? ಅಪ್ಪ ಮಕ್ಕಳು ಚುನಾವಣೆಯಲ್ಲಿ ಯಾರಿಂದ ಗೆದ್ದಿದ್ದಾರೆಂಬುದನ್ನು ತಿಳಿದುಕೊಳ್ಳಲಿ ಎಂದು ಬಿಜೆಪಿ ಎಂಎಲ್ ಸಿ ಎಚ್. ವಿಶ್ವನಾಥ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು.



