ಹೈದರಾಬಾದ್: ಕೊವ್ಯಾಕ್ಸಿನ್ ಲಸಿಕೆ ಸಿದ್ಧಗೊಳ್ಳುತ್ತಿರುವ ತೆಲಂಗಾಣದ ಭಾರತ್ ಬಯೋ ಟೆಕ್ ಸಂಸ್ಥೆಗೆ ನಾಳೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ನಾಳೆ ಮಧ್ಯಾಹ್ನ ಮೋದಿ ಪೂನಾದಿಂದ ವಿಶೇಷ ವಿಮಾನದಲ್ಲಿ ಹಕೀಂ ಪೇಟ್ ವಾಯು ನೆಲೆಗೆ ಬಂದಿಳಿಯಲಿದ್ದು, ಅಲ್ಲಿಂದ ಸೀದಾ ಭಾರತ್ ಬಯೋ ಟೆಕ್ ಸಂಸ್ಥೆಗೆ ತೆರಳಲಿದ್ದಾರೆ ಎಂದು ತೆಲಂಗಾಣ ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ತಿಳಿಸಿದ್ದಾರೆ.
ಈಗಾಗಲೇ ಮೂರು ಹಂತದ ಪರೀಕ್ಷೆಯಲ್ಲಿ ಯಶಸ್ವಿಯಾಗಿರುವ ಕೊರೊನಾ ಸೋಂಕಿನ ಲಸಿಕೆಯಾಗಿರುವ ಕೊವ್ಯಾಕ್ಸಿನ್ ತಯಾರಿಕೆಯ ಅಂತಿಮ ಸಿದ್ಧತೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಇಲ್ಲಿಗೆ ಭೇಟಿ ನೀಡುತ್ತಿರುವುದು ವಿಶೇಷವಾಗಿದೆ. ತೆಲಂಗಾಣ ಸಿಎಂ ಚಂದ್ರಶೇಖರ ರಾವ್ ಕಳೆದ 24ರಂದು ನಡೆದ ಪ್ರಧಾನಿಯವರೊಂದಿಗಿನ ವೀಡಿಯೋ ಕಾನರೆನ್ಸನಲ್ಲಿ ಕೊರೊನಾ ಲಸಿಕೆ ಕೊ ವ್ಯಾಕ್ಸಿನ್ ಹಂಚಿಕೆ ವಿಚಾರ ಕುರಿತಂತೆ ಮಾತುಕತೆ ನಡೆಸಿದ್ದರು.