ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು (ಜು. 27) ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 14 ನೇ ಕಂತಿನ ಮೊತ್ತವನ್ನು ಬಿಡುಗಡೆ ಮಾಡಿದರು. ಡಿಬಿಟಿ ಮೂಲಕ ಪಿಎಂ-ಕಿಸಾನ್ ಯೋಜನೆಯಡಿ 8.5 ಕೋಟಿ ರೈತ ಫಲಾನುಭವಿಗಳಿಗೆ 14 ನೇ ಕಂತಿನಲ್ಲಿ 17,000 ಕೋಟಿ ರೂಪಾಯಿ ಮೊತ್ತವನ್ನು ಬಿಡುಗಡೆ ಮಾಡಿದ್ದಾರೆ.
ರಾಜಸ್ತಾನದ ಸಿಕರ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳು (PMKSK) ಮತ್ತು ವೈದ್ಯಕೀಯ ಕಾಲೇಜುಗಳು ಸೇರಿದಂತೆ ಕೋಟ್ಯಂತರ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ಹಣ ಬಿಡುಗಡೆ ಮಾಡಿದರು.
ಸರ್ಕಾರವು ದೇಶದ ಚಿಲ್ಲರೆ ರಸಗೊಬ್ಬರ ಒದಗಿಸುವ ಕೇಂದ್ರಗಳನ್ನು ಹಂತ ಹಂತವಾಗಿ ಪಿಎಂ ಕಿಸಾನ್ ಸಮೃದ್ಧಿ ಕೇಂದ್ರವನ್ನಾಗಿ ಪರಿವರ್ತಿಸುತ್ತಿದೆ. ಈ ಕೇಂದ್ರಗಳು ರೈತರಿಗೆ ಕೃಷಿ-ಕಚ್ಚಾ ಸಾಮಗ್ರಿಗಳು, ಬೀಜಗಳು ಮತ್ತು ರಸಗೊಬ್ಬರಗಳನ್ನು ಒದಗಿಸುತ್ತವೆ. ಇಲ್ಲಿ ಮಣ್ಣು ಪರೀಕ್ಷೆಯನ್ನು ಕೂಡ ಮಾಡಬಹುದಾಗಿದೆ. ಇನ್ನು ಕೇಂದ್ರ ಬಿಡುಗಡೆ ಮಾಡಿರುವ ಪಿಎಂ ಕಿಸಾನ್‌ನ ಮೊತ್ತ ನಿಮ್ಮ ಖಾತೆಗೆ ಜಮೆಯಾಗಿದೆಯೇ ಎಂದು ಚೆಕ್ ಮಾಡಿಕೊಳ್ಳಲು www.pmkisan.gov.in ಗೆ ಭೇಟಿ ನೀಡಬಹುದು.
ಒಂದು ವೇಳೆ ನಿಮ್ಮ ಖಾತೆಗೆ ಹಣ ಜಮೆ ಆಗಿಲ್ಲದಿದ್ದರೆ ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ – 011-24300606 ಗೆ ಕರೆ ಮಾಡಬಹುದು. ನೀವು ಪಿಎಂ ಕಿಸಾನ್ ಟೋಲ್ ಫ್ರೀ ಸಂಖ್ಯೆ 18001155266ಕ್ಕೆ ಕರೆ ಮಾಡಬಹುದು. ಇದಲ್ಲದೇ ಇಮೇಲ್ PMkisan-ict@gov.in ಮತ್ತು pmkisan-funds@gov.in ಮೇಲ್ ಮಾಡಬಹುದು.



