ಬೆಂಗಳೂರು: ಪಂಚಮಸಾಲಿ 2ಎ ಮೀಸಲಾತಿಗೆ ಸಂಬಂಧಿಸಿದಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಸಿಎಂ ಯಡಿಯೂರಪ್ಪ ನಡುವೆ ವಾಕ್ಸಮರ ನಡೆಯಿತು.
ನಮ್ಮದ್ದು ಪ್ರಾದೇಶಿಕ ಪಕ್ಷವಲ್ಲ, ರಾಷ್ಟ್ರೀಯ ಪಕ್ಷ. ಮೀಸಲಾತಿ ವಿಚಾರವನ್ನು ನಾನು ಏಕಾಏಕಿ ತೀರ್ಮಾನ ಮಾಡಲು ಆಗುವುದಿಲ್ಲ. ಪ್ರಧಾನಿ, ಗೃಹ ಸಚಿವರು ಹಾಗೂ ಕೇಂದ್ರದ ಪ್ರಮುಖರ ಜತೆಗೆ ಚರ್ಚಿಸಿ ಮುಂದುವರಿಯಬೇಕಿದೆ. ರಾಜ್ಯದಲ್ಲಿ ನಮ್ಮದೇ ಪಕ್ಷದ 25 ಸಂಸದರು ಇದ್ದಾರೆ. ಅವರ ನಿಯೋಗವನ್ನು ಕೇಂದ್ರಕ್ಕೆ ಕರೆದುಕೊಂಡು ಹೋಗಿ ಪರಿಹಾರ ಕಂಡುಕೊಳ್ಳಿ ಎಂದು ಸಿಎಂ ಯಡಿಯೂರಪ್ಪ ಹೇಳಿದರು.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಪ್ರಸ್ತಾವಕ್ಕೆ ಮುಖ್ಯಮಂತ್ರಿ ಉತ್ತರ ನೀಡಿ ಕುಳಿತುಕೊಂಡರು. ಆಗ ದಿಢೀರ್ ಎದ್ದು ನಿಂತ ಬಸನಗೌಡ ಯತ್ನಾಳ, ಪಂಚಮಸಾಲಿ ಹಾಗೂ ಹಾಲುಮತ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಮೂರು ಪಕ್ಷಗಳ ಸದಸ್ಯರು ಸದನದಲ್ಲಿ ಧರಣಿ ನಡೆಸಿದ್ದೇವೆ. ಆದರೆ, ಆ ವಿಷಯದ ಬಗ್ಗೆ ಮುಖ್ಯಮಂತ್ರಿ ಉತ್ತರ ನೀಡಿಲ್ಲ ಎಂದು ದೂರಿದರು. ಈ ಬಗ್ಗೆ ಸಿಎಂ ನಿಲುವು ಸ್ಪಷ್ಟಪಡಿಸಬೇಕು ಎಂದು ಯತ್ನಾಳ್ ಆಗ್ರಹಿಸಿದರು.
ಮತ್ತೆ ನೀವು ಕಲಾಪ ಮುಂದೂಡಿ ಹೋಗುತ್ತೀರಿ. ಉತ್ತರವೇ ಸಿಗುವುದಿಲ್ಲ. ಮುಖ್ಯಮಂತ್ರಿ ಅವರು ಈಗಲೇ ಹೇಳಿಕೆ ನೀಡಬೇಕು‘ ಎಂದು ಯತ್ನಾಳ ಒತ್ತಾಯಿಸಿದರು.



