ಗ್ವಾಲಿಯರ್: ಸರ್ಕಾರ ಜಾರಿಗೆ ತಂದ ಕೃಷಿ ಕಾನೂನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಜತೆ ಮಾತುಕತೆಗೆ ಸರ್ಕಾರ ಸದಾ ಸಿದ್ಧವಿದ್ದು, ಪ್ರತಿಭಟನೆಗೆ ಜನ ಸೇರಿಸಿದ ಮಾತ್ರಕ್ಕೆ ಕಾಯ್ದೆಗಳನ್ನು ರದ್ದುಪಡಿಸುವುದಿಲ್ಲ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಕೃಷಿ ಕಾಯ್ದೆಯ ಯಾವ ಅಂಶ ರೈತವಿರೋಧಿ ಎನ್ನುವುದನ್ನು ಪ್ರತಿಭಟನಾ ಮುಖಂಡರು ಕೇಂದ್ರ ಸರ್ಕಾರಕ್ಕೆ ತೋರಿಸಿಕೊಡಲಿ. ಸರ್ಕಾರ ರೈತ ಮುಖಂಡರ ಜತೆ 12 ಸುತ್ತುಗಳ ಮಾತುಕತೆ ನಡೆಸಿದೆ. ಆದರೆ ಕೃಷಿ ಕಾಯ್ದೆಯ ಅಂಶಗಳ ಬಗ್ಗೆ ಆಕ್ಷೇಪಗಳನ್ನು ಪಟ್ಟಿ ಮಾಡಿ ತಿಳಿಸಿದಾಗ ಮಾತ್ರ ನಿರ್ಧಾರ ಕೈಗೊಳ್ಳಲು ಸಾಧ್ಯ ಎಂದರು.
ನೀವು ಸಾರಾಸಗಟಾಗಿ ಕಾನೂನು ರದ್ದುಪಡಿಸಿ ಎಂದು ಕೇಳುತ್ತಿದ್ದೀರಿ. ಪ್ರತಿಭಟನಾಕಾರರು ಮಾತ್ರಕ್ಕೆ ಇದು ಸಾಧ್ಯವಿಲ್ಲ ಈ ಅಂಶ ರೈತ ವಿರೋಧಿ ಎನ್ನುವುದನ್ನು ಸಂಘಟನೆಗಳು ಸರ್ಕಾರದ ಗಮನಕ್ಕೆ ತಂದರೆ ಇಂದಿಗೂ ತಿದ್ದುಪಡಿ ಮಾಡಲು ಸರ್ಕಾರ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದರು. ಪ್ರಧಾನಿ ಅವರ ನಿಲುವು ಕೂಡ ಇದೇ ಆಗಿದೆ ಎಂದು ತಿಳಿಸಿದರು.



