ಬೆಂಗಳೂರು: ನನಗೆ ಬಿಗ್ಬಾಸ್ ಸೀಸನ್ 6ಕ್ಕೆ ಆಹ್ವಾನ ಕೊಟ್ಟಿದ್ದರು. ಒಪ್ಪಿಕೊಂಡಿದ್ದೆ. ಆಗ ಆರೋಗ್ಯ ಸಮಸ್ಯೆಯಿಂದ ಹೋಗಲು ಆಗಿರಲಿಲ್ಲ. ಈಗ ಅವಕಾಶ ಸಿಕ್ಕರೆ ಹೋಗಲು ಸಿದ್ಧ ಎಂದು ವಿಧಾನಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಹೇಳಿದ್ದಾರೆ.
ಕೆಲವು ಸ್ನೇಹಿತರು ಬಿಗ್ ಬಾಸ್ ಗೆ ಹೋಗ್ತೀರಾ ಅಂತಾ ಕೇಳಿದರು. ನನಗೂ ಹೋಗಲು ಆಸೆ ಇತ್ತು. ನನಗೆ ಒಂದು ವೇದಿಕೆ ಸಿಕ್ಕಿದಂತಾಗುತ್ತದೆ ಅಂತಾ ಯೋಚನೆ ಮಾಡಿದ್ದೆ. ಚುನಾವಣೆಗಳು ಬಂದಿವೆ, ಅಲ್ಲಿ ಇಲ್ಲಿ ಜವಾಬ್ದಾರಿ ಹಾಕ್ತಾರೆ, ಹಾಗಾಗಿ ಹೋಗಲು ಸ್ವಲ್ಪ ಕಷ್ಟ ಆಗಬಹುದು. ವಿಶೇಷ ಆಹ್ವಾನಿತರಾಗಿ ಬನ್ನಿ ಅಂತಾ ಕರೆದರೆ ಮೂರ್ನಾಲ್ಕು ದಿನಕ್ಕೆ ಹೋಗಬಹುದು ಎಂದರು.
ಇನ್ನು ದೇಶದಲ್ಲಿ ಜನರಿಗೆ ಎಲ್ಲಾ ಅರ್ಥ ಆಗುತ್ತಿದ್ದರೂ ರಾಜಕಾರಣ ಅರ್ಥ ಆಗುತ್ತಿಲ್ಲ. ಆ ಮನೆಯಲ್ಲಿ ಯುವಕರು, ಸಿನಿಮಾದವರು, ಗಂಡು-ಮಕ್ಕಳು, ಹೆಣ್ಣು-ಮಕ್ಕಳು, ಸಿನಿಮಾದವರು ಇದ್ದಾರೆ. ಅಲ್ಲಿ ನಾನು ರಾಜಕಾರಣದ ಸ್ಪಾರ್ಕ್ ಹಚ್ಚಿಸಬಹುದು. ಹೀಗಾಗಿ ಅವಕಾಶ ಸಿಕ್ಕಿದರೆ ಖಂಡಿತಾ ಬಿಗ್ಬಾಸ್ ಮನೆಗೆ ಹೋಗುತ್ತೇನೆ ಎಂದು ಹೇಳಿದರು.



