ಬೆಂಗಳೂರು: ಇಂಧನ ದರ ಏರಿಕೆ, ಇ-ವೇ ಬಿಲ್ ನೀತಿ ವಿರುದ್ಧ, ಫೆಬ್ರವರಿ 26ಕ್ಕೆ, ಸಿಎಐಟಿ ಭಾರತ್ ಬಂದ್ ಗೆ ಕರೆ ನೀಡಲಾಗಿದೆ. ಇದರಿಂದ 40 ಲಕ್ಷ ಟ್ರಕ್ ಗಳು ರಸ್ತೆಗೆ ಇಳಿಯುವುದಿಲ್ಲ. ಹೀಗಾಗಿ ಅಗತ್ಯ ವಸ್ತುಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಕಾನ್ಫಿಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್(ಸಿಎಐಟಿ) ಮಾಹಿತಿ ನೀಡಿದ್ದು, ಇಂಧನ ದರ ಏರಿಕೆ, ಸರಕು ಮತ್ತು ಸೇವಾ ತೆರಿಗ ಹಾಗೂ ಹೊಸ ಇ-ವೇ ಬಿಲ್ ನೀತಿಯ ವಿರುದ್ಧ ಫೆಬ್ರವರಿ 26ರಂದು ಭಾರತ್ ಬಂದ್ ಗೆ ಕರೆ ನೀಡಲಾಗಿದೆ. ನಮ್ಮ ಬಂದ್ ಗೆ ಭಾರತದ ರಸ್ತೆ ಸಾರಿಗೆ ವಲಯದ ಅತ್ಯುನ್ನತ ಸಂಸ್ಥೆಗಳ್ಲೊಂದಾದ ಆಲ್ ಇಂಡಿಯಾ ಟ್ರಾನ್ಪೋರ್ಟರ್ಸ್ ವೆಲ್ಫೇರ್ ಅಸೋಸಿಯೇಷ್ ಬೆಂಬಲ ವ್ಯಕ್ತಪಡಿಸಿದೆ ಎಂದಿದೆ.
ಫೆ.26ರಂದು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8ವರೆಗೆ ಸುಮಾರು 40 ಲಕ್ಷ ಟ್ರಕ್ ಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಅಂದು ಒಂದು ದಿನ ಎಲ್ಲ ಬುಕ್ಕಿಂಗ್ ತಿರಸ್ಕರಿಸಲಾಗುವುದು. ಇ-ವೇ ಬಿಲ್ ಕೇಂದ್ರಿತ ಸರಕುಗಳ ಸಾಗಾಣಿಕೆಯನ್ನು ತಿರಸ್ಕರಿಸಲು ತೀರ್ಮಾನಿಸಿರುವುದಾಗಿ ತಿಳಿಸಿದೆ.