ನವದೆಹಲಿ: ಈ ಬಾರಿ ಮುಂಗಾರಿನ ಮಳೆ ಅಬ್ಬರ ಬಳಿಕ ದೇಶದಲ್ಲಿ ಚಳಿಯೂ ಅಧಿಕ ಪ್ರಮಾಣದಲ್ಲಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ತಾಪಮಾನದಲ್ಲಿ ಗಮನಾರ್ಹ ಕುಸಿತವನ್ನು ಉಂಟುಮಾಡಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಪೆಸಿಫಿಕ್ ಪ್ರದೇಶದ ಮೇಲ್ಮೈನಲ್ಲಿ ಕಡಿಮೆ ತಾಪಮಾನದಿಂದಾಗಿ ಲಾ ನಿನಾ ವಿದ್ಯಮಾನವು ಸಂಭವಿಸುತ್ತದೆ, ಇದರ ಪರಿಣಾಮ ಉತ್ತರ ಭಾರತದ ರಾಜ್ಯಗಳಾದ ಹಿಮಾಚಲ ಪ್ರದೇಶ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲಿ ತಾಪಮಾನ ತೀವ್ರವಾಗಿ ಕುಸಿತವಾಗಲಿದ್ದು, 3 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆ ಇದೆ.
ಈ ಹವಾಮಾನ ಚಳಿಗಾಲದ ಕೃಷಿಯಲ್ಲಿ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ತಿಳಿಸಿದೆ.ಇದು ಮಳೆ ಮತ್ತು ತೀವ್ರ ಚಳಿಗಾಲದಂತಹ ಹವಾಮಾನ ಬದಲಾವಣೆಗೆ ಕಾರಣವಾಗುತ್ತದೆ.ಚಳಿಯು ಅಕ್ಟೋಬರ್‌ನಿಂದ ಫೆಬ್ರುವರಿ ತಿಂಗಳಲ್ಲಿ ತೀವ್ರಗೊಳ್ಳುತ್ತದೆ.



