ಕೋಲ್ಕತಾ : ಮಾಜಿ ಕ್ರಿಕೆಟಿಗ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಆರೋಗ್ಯದಲ್ಲಿ ಅಸ್ವಸ್ಥಗೊಂಡಿದ್ದಾರೆ. ಮಧ್ಯಾಹ್ನ ಅವರನ್ನು ಕೋಲ್ಕತಾದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಗೂಲಿ ಅವರಿಗೆ ಮತ್ತೊಮ್ಮೆ ಎದೆನೋವು ಕಾಣಿಸಿಕೊಂಡಿದೆ. ತೆಂಗು ಬೆಳೆಗಾರಿಗೆ ಗುಡ್ ನ್ಯೂಸ್: ಕೊಬ್ಬರಿಗೆ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ
ಕೆ ದಿನಗಳ ಹಿಂದೆ ಲಘು ಹೃದಯಾಘಾತಕ್ಕೊಳಗಾಗಿದ್ದ ಗಂಗೂಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಆಂಜಿಯೋಪ್ಲಾಸ್ಟಿ ಹಾಗೂ ಇನ್ನಿತರ ಚಿಕಿತ್ಸೆ ನೀಡಲಾಗಿತ್ತು. ಸೌರವ್ ಗಂಗೂಲಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದರಿಂದ ಮನೆಗೆ ಕಳಿಸಲಾಗಿತ್ತು. ಗಂಗೂಲಿ ಅವರಿಗೆ ಕೋಲ್ಕತ್ತಾದ ವುಡ್ಲ್ಯಾಂಡ್ ಆಸ್ಪತ್ರೆಯಲ್ಲಿ ಎರಡನೆಯ ಆಂಜಿಯೋಪ್ಲಾಸ್ಟಿ ಮಾಡಬೇಕಾಗಿತ್ತು. ಆದರೆ, ನಂತರದ ಹಂತದಲ್ಲಿ ಮಾಡಬಹುದು ಎಂದು ವೈದ್ಯರ ತಂಡ ನಿರ್ಣಯ ತೆಗೆದುಕೊಂಡಿತ್ತು. ಬೆಂಗಳೂರಿನ ಖ್ಯಾತ ಹೃದ್ರೋಗ ತಜ್ಞ ಡಾ. ದೇವಿಶೆಟ್ಟಿ ಅವರು ದೆಹಲಿಗೆ ತೆರಳಿ, ಗಂಗೂಲಿ ಅವರ ಮುಂದಿನ ಚಿಕಿತ್ಸೆಗಳ ಬಗ್ಗೆ ವೈದ್ಯರೊಂದಿಗೆ ಸಮಾಲೋಚಿಸಿದ್ದರು.



