ನವದೆಹಲಿ: ಭಾರತೀಯ ರೈತರ ಜೀವನಾಡಿ ನೈಋತ್ಯ ಮಾನ್ಸೂನ್ (ಮುಂಗಾರು ಮಳೆ) ಜೂನ್ 1ಕ್ಕೆ ಕೇರಳ ಪ್ರವೇಶಿಸಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಈ ಬಗ್ಗೆ ಕೇಂದ್ರ ಭೂ ವಿಜ್ಞಾನಗಳ ಸಚಿವಾಲಯದ ಕಾರ್ಯದರ್ಶಿ ಎಂ.ರಾಜೀವ್ ಅವರು, ಈ ವರ್ಷ ನೈಋತ್ಯ ಮಾನ್ಸೂನ್ ಮಾರುತ ಜೂನ್ 1 ಕ್ಕೆ ಕೇರಳ ಪ್ರವೇಶಿಸಲಿದೆ. ಈ ಕುರಿತು ಮೇ. 15 ರಂದು ಹವಾಮಾನ ಇಲಾಖೆ ಅಧಿಕೃತ ಮಾನ್ಸೂನ್ ಮುನ್ಸೂಚನೆ ನೀಡಲಿದೆ. ಜೊತೆಗೆ ಸರಾಸರಿ ಮಳೆಯ ಕುರಿತು ಮಾಹಿತಿ ನೀಡಲಿದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಶೇ. 75 ರಷ್ಟು ಮಳೆಯಾಗುವ ನೈಋತ್ಯ ಮಾನ್ಸೂನ್, ಈ ಸಾಮಾನ್ಯ ಮಳೆ ಆಗಲಿದೆ ಎಂದು ಹಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿತ್ತು. ಭಾರತೀಯ ಕೃಷಿ ಚಟುವಟಿಕೆ ಮುಂಗಾರು ಮಳೆ ಮೇಲೆ ನಿಂತಿದೆ.