ದಾವಣಗೆರೆ: ಕಾರ್ಮಿಕರ ಭವಿಷ್ಯ ನಿಧಿ (PF)ಸಂಘನೆಯ ಪಿಂಚಣಿ ಯೋಜನೆಯಡಿಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯ ಪಿಂಚಣಿದಾರರು ಪಿಂಚಣಿ ಪಡೆಯುತ್ತಿದ್ದು ಇದರಲ್ಲಿ 5,577 ಪಿಂಚಣಿದಾರರು ಇದುವರೆಗೆ ತಮ್ಮ ಜೀವಿತ ಪ್ರಮಾಣ ಪತ್ರವನ್ನು ಸಲ್ಲಿಸಿರುವುದಿಲ್ಲ.
ಪಿಂಚಣಿದಾರರು ಜೀವಿತ ಪ್ರಮಾಣಪತ್ರವನ್ನು (Life Certificate)ಅಂಚೆ ಕಚೇರಿಯಲ್ಲಿಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಅಥವಾ ಬ್ಯಾಂಕ್‍ನಲ್ಲಿ (bank) ಸಲ್ಲಿಸಬಹುದು. ಅಥವಾ ತಮ್ಮ ಆಂಡ್ರಾಯ್ಡ್ ಮೊಬೈಲ್ ಪೋನ್ ಮೂಲಕ ಫೇಸ್ ಅಂಥೆಂಟಿಕೇಶನ್ ಟೆಕ್ನಾಲಜಿಯನ್ನು face (authentic technology) ಅಳವಡಿಸಿಕೊಂಡು ಜೀವಿತ ಪ್ರಮಾಣಪತ್ರವನ್ನು ಸಲ್ಲಿಸಬಹುದೆಂದು ಕ್ಷೇತ್ರಿಯ ಭವಿಷ್ಯನಿಧಿ ಆಯುಕ್ತರು ತಿಳಿಸಿದ್ದಾರೆ.



