ಮುಂಬೈ: ಕೇಂದ್ರ ಮುಂಬೈನ ವಸತಿ ಕಟ್ಟಡವೊಂದರ 18ನೇ ಮಹಡಿಯಲ್ಲಿ ಇಂದು ಬೆಳಗ್ಗೆ ಉಂಟಾದ ಭಾರಿ ಅಗ್ನಿ ಅನಾಹುತದಲ್ಲಿ ಕನಿಷ್ಠ 7 ಮೃತಪಟ್ಟು ಇತರ 17 ಮಂದಿ ಗಾಯಗೊಂಡ ಘಟನೆ ನಡೆದಿದೆ.
ಗೋವಾಲಿಯಾ ಟ್ಯಾಂಕ್‍ನ ಗಾಂ ಆಸ್ಪತ್ರೆ ಎದುರಿನ ಕಮ್ಲಾ ಕಟ್ಟಡದಲ್ಲಿ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದೆ. ದು ನೆಲಮಹಡಿ ಮತ್ತು 20 ಅಂತಸ್ತುಗಳುಳ್ಳ ಕಟ್ಟಡ. 18ನೇ ಮಹಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮಾಹಿತಿ ಲಭಿಸಿದೊಡನೆ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.13 ಅಗ್ನಿ ಶಾಮಕ ವಾಹನಗಳು, ಏಳು ವಾಟರ್ ಜೆಟ್ಟೀಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ. ಗಾಯಾಳುಗಳಲ್ಲಿ 15 ಮಂದಿಯನ್ನು ಸಮೀಪದ ಭಾಟಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಅವರು ತುರ್ತು ನಿಗಾ ಘಟಕಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಕಿ ನಂದಿಸುವ ಮತ್ತು ರಕ್ಷಣಾ ಕಾರ್ಯಮುಂದುವರೆದಿದೆ.



