ನವದೆಹಲಿ: ದೇಶದಲ್ಲಿ ಜೂನ್ ನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಈ ಬಾರಿಯ ಮಾನ್ಸೂನ್ ಸಾಮಾನ್ಯವಾಗಿರಲಿದೆ ಎಂದು ಮಾಹಿತಿ ನೀಡಿದೆ.
ಐಎಂಡಿ ಎನ್ವಿರಾನ್‌ಮೆಂಟ್ ಮಾನಿಟರಿಂಗ್ ಮತ್ತು ರಿಸರ್ಚ್ ಸೆಂಟರ್ (ಇಎಂಆರ್‌ಸಿ) ಮುಖ್ಯಸ್ಥ ಡಿ.ಶಿವಾನಂದ ಪೈ ಮಾತನಾಡಿ, ದಕ್ಷಿಣ ಭಾರತ, ವಾಯುವ್ಯ ಭಾರತ, ಉತ್ತರ ಭಾರತ ಮತ್ತು ಕೆಲವು ಪ್ರತ್ಯೇಕ ಪ್ರದೇಶ ಹೊರತುಪಡಿಸಿ ದೇಶದ ಹೆಚ್ಚಿನ ಭಾಗಗಳಲ್ಲಿ ಜೂನ್ ನಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ನಿರೀಕ್ಷೆಯಿದೆ.ಈಶಾನ್ಯ ಭಾಗದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಲಿದೆ.
ಮನ್ಸೂನ್ ಮಳೆಯು ಸಾಮಾನ್ಯವಾಗಿ ದೀರ್ಘಾವಧಿಯ ಸರಾಸರಿಯ 94 ರಿಂದ 106 ಪ್ರತಿಶತ ಇರುತ್ತದೆ. ಸಮಭಾಜಕ ಪೆಸಿಫಿಕ್ ಮಹಾಸಾಗರದಲ್ಲಿ ಬಿಸಿಯಾಗುತ್ತಿರುವ ಕಾರಣ ಎಲ್ ನಿನೊ ಉಂಟಾದಾಗಲೂ ನೈರುತ್ಯ ಮುಂಗಾರು ಈ ಋತುವಿನಲ್ಲಿ ಸಾಮಾನ್ಯವಾಗಿರಲಿದೆ ಎಂದು ತಿಳಿಸಿದರು.



