ನವದೆಹಲಿ: ತಿಂಗಳ ಮೊದಲ ದಿನವೇ ಪೆಟ್ರೋಲಿಯಂ ಕಂಪನಿಗಳು ಗ್ರಾಹಕರಿಗೆ ಶಾಕ್ ನೀಡಿದ್ದು, ಇಂದಿನಿಂದ ವಾಣಿಜ್ಯ ಬಳಕೆ ಗ್ಯಾಸ್ (Commercial Cylinder) ದರವನ್ನು ಹೆಚ್ಚಿಸಿದ್ದ, 100 ರೂ. ಏರಿಸಲಾಗಿದೆ. ಇದರಿಂದ ಹೋಟೆಲ್, ರೆಸ್ಟೋರೆಂಟ್ ಆಹಾರ ಬೆಲೆ ಮೇಲೆ ಪರಿಣಾಮ ಬೀರಲಿದೆ.
ವಾಣಿಜ್ಯ ಸಿಲಿಂಡರ್ ಬೆಲೆ 100 ರೂಪಾಯಿ ಏರಿಕೆಯಿಂದ ದೇಶದ ರಾಜಧಾನಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆ 2101 ರೂಪಾಯಿಗೆ ಏರಿಕೆಯಾಗಿದೆ. ಈ ಹಿಂದೆ ನವೆಂಬರ್ 1 ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 266 ರೂ.ಗಳಷ್ಟು ಹೆಚ್ಚಿಸಲಾಗಿತ್ತು. ಕಮರ್ಷಿಯಲ್ ಸಿಲಿಂಡರ್ ಬೆಲೆ 100 ರೂ. ಏರಿಕೆಯಿಂದ ಕೋಲ್ಕತ್ತಾದಲ್ಲಿ ಸಿಲಿಂಡರ್ ಬೆಲೆ 2177 ರೂ., ಮುಂಬೈನಲ್ಲಿ 19 ಕೆಜಿ ಸಿಲಿಂಡರ್ 2051 ರೂ., ಚೆನ್ನೈನಲ್ಲಿ 2,234 ರೂಪಾಯಿ ಪಾವತಿಸಬೇಕಾಗುತ್ತದೆ.



