ನವದೆಹಲಿ: ದೇಶದಲ್ಲಿ ಈಗಾಲೇ ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದಾಗಿ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಇದರ ನಡುವೆ ಸರ್ಕಾರಿ ತೈಲ ಕಂಪನಿಗಳು ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಮತ್ತೊಮ್ಮೆ ಹೆಚ್ಚಿಸಿವೆ.
ಸಬ್ಸಿಡಿ ರಹಿತ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 769 ರೂಗಳಿಂದ 794 ರೂ.ಗೆ ಹೆಚ್ಚಾಗಿದೆ. ಈ ಹೊಸ ಬೆಲೆಗಳು ಇಂದಿನಿಂದಲೇ (ಫೆ. 25) ಜಾರಿಗೆ ಬಂದಿದೆ. ಈ ತಿಂಗಳು ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇದು ಮೂರನೇ ಹೆಚ್ಚಳವಾಗಿದೆ. ಸಬ್ಸಿಡಿ ರಹಿತ ಸಿಲಿಂಡರ್‌ಗಳ ಬೆಲೆಯನ್ನು ಇಂದು 25 ರೂ.ವರೆಗೆ ಹೆಚ್ಚಿಸಲಾಗಿದೆ.
ಫೆಬ್ರವರಿ ತಿಂಗಳಲ್ಲಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಮೂರು ಬಾರಿ ಹೆಚ್ಚಿಸಲಾಗಿದೆ. ಫೆಬ್ರವರಿ 4 ರಂದು ಸರ್ಕಾರ ಎಲ್‌ಪಿಜಿ ಬೆಲೆಯನ್ನು 25 ರೂ.ಗೆ ಹೆಚ್ಚಿಸಿತ್ತು. ಅದರ ನಂತರ ಫೆಬ್ರವರಿ 15 ರಂದು ಒಂದು ಸಿಲಿಂಡರ್ ಬೆಲೆಯನ್ನು 50 ರೂ. ಈಗ ಮತ್ತೆ 25 ರೂಪಾಯಿಗಳನ್ನು ಹೆಚ್ಚಿಸಿದೆ. ಒಂದು ತಿಂಗಳಲ್ಲಿ ಮೂರನೇ ಬಾರಿ ಬೆಲೆ ಏರಿಕೆಯಾಗಿದ್ದು, ಒಟ್ಟು 100 ರೂಪಾಯಿ ಏರಿಕೆಯಾಗಿದೆ.
ಫೆಬ್ರವರಿ 4 ರಂದು ಹೆಚ್ಚಿದ ನಂತರ ಅದರ ಬೆಲೆ 644 ರೂ.ಗಳಿಂದ 719 ರೂ.ಗೆ ಏರಿದೆ. ಫೆಬ್ರವರಿ 15 ರಂದು ಬೆಲೆ 719 ರೂ.ನಿಂದ 769 ರೂ.ಗೆ ಮತ್ತು ಫೆಬ್ರವರಿ 25 ರಂದು ಬೆಲೆ 769 ರಿಂದ 794 ರೂಪಾಯಿಗೆ ಹೆಚ್ಚಾಗಿದೆ.



