ನವದೆಹಲಿ: ಲೋಕಸಭೆ ಚುನಾವಣೆ ನಡೆಯುತ್ತುರುವ ಹೊತ್ತಲ್ಲೇ ಇಂದಿನಿಂದ ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ತೈಲ ಕಂಪನಿಗಳು 19 ರೂ. ಇಳಿಸಿವೆ. ದರ ಇಳಿಕೆ ವಾಣಿಜ್ಯ ಸಿಲಿಂಡರ್ ಗಳಿಗೆ ಮಾತ್ರ ಅನ್ವಯವಾಗಲಿದ್ದು, ಗೃಹ ಬಳಕೆ ಸಿಲಿಂಡರ್ ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ದರ ಇಳೆಕೆ ನಂತರ ಇಂದಿನಿಂದ (ಮೇ 1) ದೆಹಲಿಯಲ್ಲಿ 1764.50 ರೂ.ಗಳ ಬದಲು 1745.50 ರೂ.ಗೆ ಲಭ್ಯವಿದೆ. ಕೋಲ್ಕತ್ತಾದಲ್ಲಿ 1879.00 ರೂ.ಗಳ ಬದಲು 1859 ರೂ.ಗೆ ಲಭ್ಯವಿದೆ. ಮುಂಬೈನಲ್ಲಿ1717.50 ರ ಬದಲು 1698.50 ರೂ.ಗೆ ಲಭ್ಯವಿದೆ. ಚೆನ್ನೈನಲ್ಲಿ ಎಲ್ಪಿಜಿ ಸಿಲಿಂಡರ್ ಈಗ 1930.00 ರೂ.ಗಳ ಬದಲು 1911 ರೂ.ಗೆ ಲಭ್ಯವಿದೆ.