ನವದೆಹಲಿ: ಇಂದಿನಿಂದ (ಡಿ. 22) ಎಲ್ ಪಿ ಜಿ ಸಿಲಿಂಡರ್ ಬೆಲೆಯಲ್ಲಿ 39.50 ರೂ.ಗಳಷ್ಟು ಇಳಿಕೆಯಾಗಿದೆ. ಈ ದರ ಕಡಿತ 19 ಕೆಜಿ ವಾಣಿಜ್ಯ ಸಿಲಿಂಡರ್ ಗಳಿಗೆ ಮಾತ್ರ ಅನ್ವಯವಾಗಲಿದೆ. ಸಾಮಾನ್ಯವಾಗಿ ತಿಂಗಳ ಮೊದಲ ದಿನ ಸಿಲಿಂಡರ್ ಬೆಲೆ ಪರಿಷ್ಕರಿಸಲಾಗುತ್ತಿತ್ತು. ಆದರೆ, ಈ ಬಾರಿ ಇನ್ನೂ 8 ದಿನ ಮೊದಲೇ ದರದಲ್ಲಿ ಇಳಿಕೆಯಾಗಿದೆ. ಗೃಹ ಬಳಕೆ ಸಿಲಿಂಡರ್ ಗಳಲ್ಲಿ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
19 ಕೆಜಿ ಇಂಡೇನ್ ಕಮರ್ಷಿಯಲ್ ಸಿಲಿಂಡರ್ ಬೆಲೆ ಕಡಿತ ಬಳಿಕೆ ದೆಹಲಿಯಲ್ಲಿ 1757 ರೂ.ಗೆ ಲಭ್ಯವಿದೆ. ಇದಕ್ಕೂ ಮೊದಲು 1796.50 ರೂ. ದರವಿತ್ತು. ಕೋಲ್ಕತ್ತಾದಲ್ಲಿ 1868.50 ರೂ. ಮುಂಬೈಯಲ್ಲಿ 1710 ರೂ.ಗೆ ಲಭ್ಯವಿದೆ. ಚ1929 ರೂ.ಗೆ ಅಗ್ಗವಾಗಿದೆ.ಇನ್ನೂ ಗೃಹ ಬಳಕೆಯ ಎಲ್ ಪಿಜಿ ಸಿಲಿಂಡರ್ ಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಆಗಸ್ಟ್ 30, 2023 ರಂದು ಗೃಹ ಬಳಕೆ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು 200 ರೂ.ಗೆ ಇಳಿಸಲಾಗಿತ್ತು.



