ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು (ಮಾ.08) ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಕರ್ನಾಟಕದ ಏಳು ಕ್ಷೇತ್ರದ ಟಿಕೆಟ್ ಘೋಷಿಸಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರು ಪಟ್ಟಿ ಬಿಡುಗಡೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ 28 ಕ್ಷೇತ್ರಗಳ ಪೈಕಿ, ತುಮಕೂರು, ವಿಜಯಪುರ, ಹಾವೇರಿ, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಮಂಡ್ಯ ಹಾಗೂ ಹಾಸನ ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಿದೆ.
- ಯಾವ ಕ್ಷೇತ್ರದಿಂದ ಯಾರು…?
- ತುಮಕೂರು-ಮುದ್ದಹನುಮೇಗೌಡ
- ಶಿವಮೊಗ್ಗ-ನಟ ಶಿವರಾಜ್‌ಕುಮಾರ್ ಪತ್ನಿ ಗೀತಾ
- ಬೆಂಗಳೂರು ಗ್ರಾಮಾಂತ- ಹಾಲಿ ಸಂಸದ ಡಿ.ಕೆ.ಸುರೇಶ್
- ಹಾಸನ- ಶ್ರೇಯಸ್ ಪಟೇಲ್
- ವಿಜಯಪುರ-ಎಸ್.ಆರ್. ಅಲಗೂರ
- ಹಾವೇರಿ- ಆನಂದಸ್ವಾಮಿ ಗಡ್ಡದವೇರಮಠ
- ಮಂಡ್ಯ-ವೆಂಕಟರಮಣಗೌಡ (ಸ್ಟಾರ್ ಚಂದ್ರು)



