ನವದೆಹಲಿ: 2024ರ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಮೊದಲ ಹಂತದ ಚುನಾವಣೆ ಏಪ್ರಿಲ್ 19ರಂದು ನಡೆಯಲಿದೆ. ಒಟ್ಟು 7 ಹಂತಗಳಲ್ಲಿ ಚುಣಾವಣೆ ನಡೆಯಲಿದೆ. ಜೂನ್ 4ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. 543 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ.
7 ಹಂತಗಳಲ್ಲಿ ಚುಣಾವಣೆ ನಡೆಯಲಿದೆ. ಹಂತ 1: ಏಪ್ರಿಲ್ 19, ಹಂತ 2: ಏಪ್ರಿಲ್ 26, ಹಂತ 3: ಮೇ 7, ಹಂತ 4: ಮೇ 13, ಹಂತ 5: ಮೇ 20ರಂದು, ಹಂತ 6: ಮೇ 25 ಹಾಗೂ ಹಂತ 7: ಜೂನ್ 1ರಂದು ನಡೆಯಲಿದೆ.ಒಟ್ಟು 4 ರಾಜ್ಯಗಳಲ್ಲಿ ವಿಧಾನಸಭೆ, ಲೋಕಸಭಾ ಚುನಾವಣೆ ಒಟ್ಟಿಗೆ ನಡೆಯಲಿದೆ
ಕೇಂದ್ರ ಚುನಾವಣಾ ಆಯೋಗದ ಆಯುಕ್ತರಾದ ರಾಜೀವ್ ಕುಮಾರ್ ಸುದ್ದಿಗೋಷ್ಠಿಯಲ್ಲಿ (Election Commission Of India) ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿದ್ದು, ಇಂದಿನಿಂದಲೇ ನೀತಿ ಸಂಹಿತೆ ದೇಶಾದ್ಯಂತ ಜಾರಿಯಾಗಲಿದೆ.ಕರ್ನಾಟಕದಲ್ಲಿ 2 ಹಂತದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಲಿದೆ. ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 7ರಂದು ಮತದಾನ ನಡೆಯಲಿದೆ.ಕರ್ನಾಟಕದಲ್ಲಿ ಏಪ್ರಿಲ್ 26ರಂದು ಹಾಗೂ ಮೇ 7ರಂದು ಮತದಾನ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ, ಫಲಿತಾಂಶ ಪ್ರಕಟವಾಗಲಿದೆ.
ರಾಜ್ಯದಲ್ಲಿ ಒಟ್ಟು 28 ಲೋಕಸಭಾ ಕ್ಷೇತ್ರಗಳಿದ್ದು ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿತ್ತು. 25 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರೆ ಕಾಂಗ್ರೆಸ್ ಬೆಂಗಳೂರು ಗ್ರಾಮಾಂತರದಲ್ಲಿ ಮಾತ್ರ ಜಯ ಗಳಿಸಿತ್ತು. ಉಳಿದಂತೆ ಜೆಡಿಎಸ್ ಒಂದು ಸ್ಥಾನ ಹಾಗೂ ಪಕ್ಷೇತರ ಅಭ್ಯರ್ಥಿ ಒಂದು ಸ್ಥಾನ ಗಳಿಸಿದ್ದರು.
- ಚುನಾವಣೆ ಪ್ರಮುಖಾಂಶ
- ಈ ಬಾರಿ 97 ಕೋಟಿ ಮತದಾರರು ಹಕ್ಕು ಚಲಾವಣೆಗೆ ಅರ್ಹರಾಗಿದ್ದಾರೆ. 49.72 ಕೋಟಿ ಪುರುಷರು ಮತದಾರರು, 47.15 ಕೋಟಿ ಮಹಿಳಾ ಮತದಾರರು.
- ದೇಶಾದ್ಯಂತ 10 ಲಕ್ಷ 5 ಸಾವಿರ ಮತಕಟ್ಟೆಗಳಲ್ಲಿ ಮತದಾನ ನಡೆಯಲಿದೆ. 55 ಲಕ್ಷ ಇವಿಎಂಗಳ ವ್ಯವಸ್ಥೆ ಮಾಡಲಾಗಿದೆ. ಚುನಾವಣೆಗಾಗಿ 4 ಲಕ್ಷ ವಾಹನಗಳ ಬಳಕೆ.
- 1.5 ಕೋಟಿ ಅಧಿಕಾರಿಗಳು, ಭದ್ರತಾ ಸಿಬ್ಬಂದಿ ಚುನಾವಣೆ ಹೊಣೆ ಹೊತ್ತಿರುತ್ತಾರೆ.
1.8 ಕೋಟಿ ಮತದಾರರು ಮೊದಲ ಬಾರಿಗೆ ಮತದಾನ ಮಾಡುತ್ತಿದ್ದಾರೆ. ಇವರು 18-19 ವರ್ಷದೊಳಗಿನ ಮತದಾರರು .
- 20ರಿಂದ 22 ವರ್ಷದೊಳಗೆ 19.74 ಕೋಟಿ ಮತದಾರರು ಇದ್ದಾರೆ.
80 ವರ್ಷ ದಾಟಿದ ಮತದಾರರ ಸಂಖ್ಯೆ 1.98 ಕೋಟಿ.
- 2.18 ಲಕ್ಷ ಶತಾಯುಷಿ ಮತದಾರರು ಇದ್ದಾರೆ.
85 ವರ್ಷಕ್ಕೂ ಮೇಲ್ಪಟ್ಟ, ಅಂಗವೈಕಲ್ಯ ಹೊಂದಿರುವ ಮತದಾರರಿಗೆ ಮನೆ ಮತದಾನದ ಸೌಲಭ್ಯ ಲಭ್ಯವಿದೆ.
- 12 ರಾಜ್ಯಗಳಲ್ಲಿ ಮಹಿಳಾ ಮತದಾರರ ಸಂಖ್ಯೆ ಏರಿಕೆ.
- ಮತದಾರರಿಗೆ ಹಣ ಹಂಚಿದರೆ ಕಠಿಣ ಕಾನೂನು ಕ್ರಮ, ಅಕ್ರಮ ಹಣ ಸಾಗಟಕ್ಕೂ ಕಡಿವಾಣ.
ತಪ್ಪು ಮಾಹಿತಿ, ಸುಳ್ಳು ಸುದ್ದಿಗಳ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ ಚುನಾವಣೆ ಆಯೋಗ.
- ನಕಲಿ ಸುದ್ದಿಗಳನ್ನು ಮಾಡುವಂತೆ ಇಲ್ಲ, ವಿಶೇಷವಾಗಿ ಸೋಷಿಯಲ್ ಮೀಡಿಯಾದಲ್ಲಿನ ನಕಲಿ ಸುದ್ದಿಗಳ ಶೇರ್ ಬಗ್ಗೆ ವಾರ್ನಿಂಗ್.
- ಮಕ್ಕಳನ್ನು ಚುನಾವಣಾ ಕ್ಯಾಂಪೇನ್ಗಳಿಗೆ ಬಳಸುವಂತಿಲ್ಲ ಎಂದು ಎಚ್ಚರಿಸಿದ ಚುನಾವಣಾ ಆಯೋಗ.