ಪಟ್ನಾ: ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್ ಕುರಿತು ಬಿಜೆಪಿ ನಿಲುವು ಸ್ಪಷ್ಟಪಡಿಸಬೇಕು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿ(ಯು) ಪಕ್ಷವು ಆಗ್ರಹಿಸಿದೆ.
ದಿ. ರಾಮ್‌ವಿಲಾಸ್ ಪಾಸ್ವಾನ್‌ಗೆ ನಿತೀಶ್ ಕುಮಾರ್ ಅವಮಾನ ಮಾಡಿದ್ದಾರೆ ಎಂದು ಚಿರಾಗ್ ಪಾಸ್ವಾನ್ ಆರೋಪಿಸಿದ್ದರು. ಬಿಹಾರ ಚುನಾವಣೆಯಲ್ಲಿ ಜೆಡಿಯು ಜತೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಆದರೆ, ಬಿಜೆಪಿಯನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.
ಬಿಜೆಪಿ ಜೆಡಿಯು ಜತೆಗೆ ಮೈತ್ರಿ ಮುಂದುವರಿಸಿದ್ದು, ಚಿರಾಗ್ ವಿಚಾರದಲ್ಲಿ ಮೌನವಾಗಿದೆ. ಎಲ್‌ಜೆಪಿ ವಿಚಾರದಲ್ಲಿ ಬಿಜೆಪಿಯು ನಿಲುವು ಸ್ಪಷ್ಟಪಡಿಸಬೇಕು ಎಂದು ಜೆಡಿಯು ಆಗ್ರಹಿಸಿದೆ. ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದ ಚಿರಾಗ್ , ನಿತೀಶ್ ಕುಮಾರ್ ಮತ್ತೆ ಬಿಹಾರದ ಮುಖ್ಯಮಂತ್ರಿಯಾದರೆ ಎನ್‌ಡಿಎ ಮೈತ್ರಿಕೂಟ ತೊರೆಯುವುದಾಗಿ ಹೇಳಿದ್ದಾರೆ.