ಕೊಲ್ಕತಾ: ಇತ್ತೀಚೆಗೆ ಧಾರವಾಡದ ಸಮೀಪ ನಡೆದ ಭೀಕರ ಅಪಘಾತದಲ್ಲಿ 11 ಮೃತಪಟ್ಟ ಪ್ರಕರಣ ಮಾಸುವ ಮುನ್ನವೇ ಟಾಟಾ ಮ್ಯಾಜಿಕ್ ಮತ್ತು ಮಾರುತಿ ವ್ಯಾನ್ ಮುಖಾಮುಖಿ ಡಿಕ್ಕಿಯಾಗಿ 13 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, 18 ಮಂದಿ ಗಂಭೀರ ಗಾಯವಾಗಿರುವ ಭಯಾನಕ ಘಟನೆ ನಡೆದಿದೆ.
ಪಶ್ಚಿಮ ಬಂಗಾಳದ ರಾಷ್ಟ್ರೀಯ ಹೆದ್ದಾರಿ ಜಲ್ದಡ್ಕ ಬ್ರಿಡ್ಜ್ ಬಳಿ. ಹಿಮದಿಂದ ರಸ್ತೆ ಕಾಣದಿದ್ದ ಹಿನ್ನೆಲೆಯಲ್ಲಿ ಈ ವಾಹನಗಳು ಮುಖಾಮುಖಿ ಡಿಕ್ಕಾಗಿರುವುದಾಗಿ ವರದಿಯಾಗಿದೆ. ಎರಡೂ ವಾಹನಗಳು ನಜ್ಜುಗುಜ್ಜಾಗಿವೆ.
ಜಲ್ ಪೈಗುರಿ ಜಿಲ್ಲೆಯ ದುಪ್ ಗುರಿಗೆ ಹೊರಟಿದ್ದ ಟಾಟಾ ಮ್ಯಾಜಿಕ್ ವಾಹನ ಲಾರಿಗೆ ಡಿಕ್ಕಿ ಹೊಡೆದ ಕಾರಣ ಲಾರಿ ಚಾಲಕ ನಿಯಂತ್ರಣ ತಪ್ಪಿ, ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಮಿನಿವ್ಯಾನ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಅಪಘಾತದಲ್ಲಿ 13 ಮಂದಿ ಮೃತಪಟ್ಟಿದ್ದು, 18 ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಗಂಭೀರ ಸ್ಥಿತಿಯಲ್ಲಿರುವ ನಾಲ್ಕು ಮಂದಿಯನ್ನು ಜಲ್‌ಪೈಗುರಿ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್‌ಗೆ, ಮೂವರನ್ನು ಉತ್ತರ ಬಂಗಾಲದ ವೈದ್ಯಕೀಯ ಕಾಲೇಜ್‌ಗೆ, ಒಬ್ಬರನ್ನು ಜಲ್‌ಪೈಗುರಿ ಸರ್ದಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ



