ನವದೆಹಲಿ : ವಾಹನ ಸವಾರರಿಗೆ ಕೇಂದ್ರ ಹೆದ್ದಾರಿ ಸಚಿವಾಲಯ ಗುಡ್ ನ್ಯೂಸ್ ನೀಡಿದ್ದು, ಫಾಸ್ಟ್ಯಾಗ್ ಕಡ್ಡಾಯವನ್ನು ಫೆಬ್ರವರಿ 15 ರವರೆಗೆ ವಿಸ್ತರಣೆ ಮಾಡಲಾಗಿದೆ.
ಇದಕ್ಕೂ ಮುನ್ನ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ 2021ರ ಜನವರಿ 1ರಿಂದ ಎಲ್ಲಾ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯಗೊಳಿಸುವ ಅಧಿಸೂಚನೆ ಹೊರಡಿತ್ತು. ಇದೀಗ 2021 ಫೆಬ್ರವರಿ 15 ರವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಡಿಸೆಂಬರ್ 1, 2017ಕ್ಕಿಂತ ಮೊದಲು ಮಾರಾಟವಾದ ಎಂ ಮತ್ತು ಎನ್ ವರ್ಗದ ನಾಲ್ಕು ಚಕ್ರದ ವಾಹನಗಳಿಗೆ ಎಫ್ ಎಎಸ್ ಟ್ಯಾಗ್ ಕಡ್ಡಾಯಗೊಳಿಸಲಾಗಿದೆ.
ಪ್ರಸ್ತುತ, ಫಾಸ್ಟ್ಯಾಗ್ ನ ವ್ಯವಹಾರಗಳ ಪಾಲು 75-80% ಆಸುಪಾಸಿನಲ್ಲಿದೆ. ಫೆಬ್ರವರಿ 15ರಿಂದ ಶೇ.100ರಷ್ಟು ನಗದುರಹಿತ ಶುಲ್ಕ ವಸೂಲಿ ಗೆ ಹೆದ್ದಾರಿ ಪ್ರಾಧಿಕಾರ ದಿಂದ ಅಗತ್ಯ ನಿಯಂತ್ರಣ ವನ್ನು ಪಡೆಯಬಹುದು ಎಂದು ರಾಷ್ಟ್ರೀಯ ಹೆದ್ದಾರಿ ತಿಳಿಸಿದೆ.