Connect with us

Dvgsuddi Kannada | online news portal | Kannada news online

ಗ್ರಾಹಕರಿಗೆ ದರ ಏರಿಕೆ ಶಾಕ್ ; ಎಲ್ ಪಿ‌ಜಿ ಸಿಲಿಂಡರ್ ಬೆಲೆ 25.50 ರೂ. ಏರಿಕೆ

ಪ್ರಮುಖ ಸುದ್ದಿ

ಗ್ರಾಹಕರಿಗೆ ದರ ಏರಿಕೆ ಶಾಕ್ ; ಎಲ್ ಪಿ‌ಜಿ ಸಿಲಿಂಡರ್ ಬೆಲೆ 25.50 ರೂ. ಏರಿಕೆ

ನವದೆಹಲಿ: ಲೋಕಸಭಾ ಚುನಾವಣೆ ಘೋಷಣೆ ಮುನ್ನ ತೈಲ ಕಂಪನಿಗಳು ಎಲ್‌ ಪಿಜಿ ಗ್ರಾಹಕರಿಗೆ ಸಿಲಿಂಡರ್‌ ದರ ಏರಿಕೆ ಶಾಕ್ ನೀಡಿವೆ. ಇಂದಿನಿಂದ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯಲ್ಲಿ 25.50 ರೂ. ಹೆಚ್ಚಳವಾಗಿದೆ.

ತೈಲ ಮಾರುಕಟ್ಟೆ ಕಂಪನಿಗಳು ಮಾರ್ಚ್ 1 ರ ಶುಕ್ರವಾರ ಎಲ್‌ ಪಿಜಿ ಸಿಲಿಂಡರ್‌ ದರಗಳನ್ನು ಘೋಷಿಸಿದ್ದು, ಇಂದಿನಿಂದ 19 ಕೆಜಿ ಎಲ್‌ ಪಿಜಿ ವಾಣಿಜ್ಯ ಸಿಲಿಂಡರ್‌ ಗಳ ಬೆಲೆಯಲ್ಲಿ ದರಗಳನ್ನು ನವೀಕರಿಸಿವೆ.

ಇಂದಿನಿಂದ ದೆಹಲಿ ಮತ್ತು ಮುಂಬೈನಲ್ಲಿ ಎಲ್ಪಿಜಿ ಸಿಲಿಂಡರ್ಗಳ ಬೆಲೆ 25.50 ರೂ. ಕೋಲ್ಕತ್ತಾದಲ್ಲಿ 24 ರೂ., ಚೆನ್ನೈನಲ್ಲಿ 23.50 ರೂ. ಏರಿಕೆಯಾಗಿದೆ. ಇಂದು ಅಹಮದಾಬಾದ್, ಮೀರತ್, ದೆಹಲಿ, ಜೈಪುರ, ಇಂದೋರ್, ಲಕ್ನೋ, ಆಗ್ರಾ, ಮುಂಬೈ ಮತ್ತು ದೇಶಾದ್ಯಂತ ಎಲ್ಪಿಜಿ ದರಗಳನ್ನು ಹೆಚ್ಚಿಸಲಾಗಿದೆ. ಆದರೆ 14.2 ಕೆಜಿ ದೇಶೀಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ.

ಇಂದು, ವಾಣಿಜ್ಯ ಸಿಲಿಂಡರ್ ದೆಹಲಿಯಲ್ಲಿ 1769.50 ರೂ.ಗಳ ಬದಲು 1795 ರೂ.ಗೆ ಲಭ್ಯವಿದೆ. ಕೋಲ್ಕತ್ತಾದಲ್ಲಿ ಈ ಸಿಲಿಂಡರ್ ಈಗ 1887 ರೂ.ಗಳ ಬದಲು 1911 ರೂ.ಗೆ ಏರಿದೆ. ವಾಣಿಜ್ಯ ಸಿಲಿಂಡರ್ ಬೆಲೆ ಈಗ ಮುಂಬೈನಲ್ಲಿ 1749 ರೂ.ಗೆ ಮತ್ತು ಚೆನ್ನೈನಲ್ಲಿ 1960 ರೂ.ಗೆ ಏರಿದೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top