ನವದೆಹಲಿ: ಆಯಿಲ್ ಕಂಪನಿಗಳು 19 ಕೆಜಿಯ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ನಾಲ್ಕು ಮೆಟ್ರೋ ನಗರಗಳಲ್ಲಿ ಸಿಲಿಂಡರ್ಗೆ 57.50 ರೂ. ನಷ್ಟು ಇಳಿಕೆ ಮಾಡಿವೆ. ನವದೆಹಲಿ, ಮುಂಬೈ, ಕೋಲ್ಕತಾ ಮತ್ತು ಚೆನ್ನೈ ಮಹಾನಗರಿಗಳಲ್ಲಿ ಬೆಲೆ ಇಳಿಕೆ ಆಗಿದೆ.
ನವೆಂಬರ್ 16 (ಗುರುವಾರದಿಂದಲೇ) ಹೊಸ ದರ ಜಾರಿಗೆ ಬಂದಿದೆ. ದೀಪಾವಳಿಗೆ ಮುನ್ನ ಸಿಲಿಂಡರ್ಗೆ 101.5 ರೂನಷ್ಟು ಬೆಲೆ ಏರಿಕೆಯ ಬಿಸಿ ಕಂಡಿದ್ದ ಬೆಲೆ, ಈಗ ಇಳಿಕೆಯಾಗಿದೆ. ದರ ಇಳಿಕೆ ನಂತರ ದೆಹಲಿ 1,775.5 ರೂ, ಕೋಲ್ಕತಾ 1,885.5 ರೂ, ಮುಂಬೈ 1,728 ರೂ, ಚೆನ್ನೈ 1,942 ರೂ, ಆಗಿದೆ. ಇನ್ನೂ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿ ಯಾವ ಬದಲಾವಣೆ ಆಗಿಲ್ಲ. ಬೆಂಗಳೂರಿನಲ್ಲಿ ಡೊಮೆಸ್ಟಿಕ್ ಗ್ಯಾಸ್ ಬೆಲೆ 14.2 ಕಿಲೋ ಸಿಲಿಂಡರ್ಗೆ 905.50 ರೂ ಇದೆ.