ನವದೆಹಲಿ: ದೇಶದಲ್ಲಿ ಪ್ರಪ್ರಥಮ ಬಾರಿಗೆ ಪೆಪರ್ ಲೆಸ್ ಕೇಂದ್ರ ಬಜೆಟ್ ಮಂಡನೆಯಾಗ್ತಿದ್ದು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವ್ರು ಬಜೆಟ್ ಮಂಡಿಸುತ್ತಿದ್ದಾರೆ. ಉಜ್ವಲ ಯೋಜನೆ ಯನ್ನು 1 ಕೋಟಿ ಹೆಚ್ಚು ಫಲಾನುಭವಿಗಳಿಗೆ ವಿಸ್ತರಿಸಲಾಗುವುದು ಘೋಸಿಸಿದರು.
ಮುಂದಿನ 3 ವರ್ಷಗಳಲ್ಲಿ 100 ಹೆಚ್ಚು ಜಿಲ್ಲೆಗಳನ್ನು ನಗರ ಅನಿಲ ವಿತರಣೆಗಾಗಿ ಸೇರಿಸಲಿದೆ ಅಂತ ತಿಳಿಸಿದರು. ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ)ಯಡಿ ಕೇಂದ್ರ ಸರಕಾರವು ಉಚಿತ ಸಿಲಿಂಡರ್ ನೀಡುತ್ತಿದೆ.
ಉಜ್ವಲ ಯೋಜನೆಗೆ ನೋಂದಣಿ ಮಾಡಿಕೊಳ್ಳುವುದು ಸುಲಭವಾಗಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಯಾವುದೇ ಕುಟುಂಬದ ಮಹಿಳೆ ಉಜ್ವಲ ಯೋಜನೆ ಫಲಾನುಭವಿಗಳಾಗಲು ಅರ್ಹರು. ಈ ಯೋಜೆನೆ ಅಡಿ ಗ್ಯಾಸ್ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಯೋಜನೆಗೆ ಸಂಬಂಧಿಸಿದ ಅಧಿಕೃತ ವೆಬ್ ಸೈಟ್ pmujjwalayojana.com ಭೇಟಿ ನೀಡಿ ನೋಂದಾಯಿಸಿಕೊಳ್ಳಬೇಕಿದೆ.