ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ಕೇಂದ್ರ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ತೆಂಗು ಬೆಳೆಯುವ ರೈತರಿಗೆ ಪ್ರತಿ ಕ್ವಿಂಟಾಲ್ ಬೆಂಬಲ ಬೆಲೆಯನ್ನು ರೂ ಹೆಚ್ಚಿಸಲಾಗಿದ್ದು, ಈಗ 10,335 ರೂ.ಗೆ ಏರಿಕೆಯಾಗಿದೆ.
ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮಗಳಿಗೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸಚಿವ ಸಂಪುಟದಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳನ್ನು ಮಾಧ್ಯಮಗಳಿಗೆ ಅವರು ತಿಳಿಸಿದರು. ಕೊಬ್ಬರಿ ಬೆಳೆಗಾರರ ಪರವಾಗಿ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಮಾಹಿತಿ ನೀಡಿದರು.
ಕೊಬ್ಬರಿಯ ಬೆಂಬಲ ಬೆಲೆ ಹೆಚ್ಚಿಸಲಾಗಿದೆ. ಪ್ರತಿ ಕ್ವಿಂಟಾಲ್ ಗೆ 375 ರೂ ಹೆಚ್ಚಿಸಲಾಗಿದ್ದು, ಈ ಹಿಂದೆ ಪ್ರತಿ ಕ್ವಿಂಟಾಲ್ ಗೆ 9960 ರೂ.ಗಳಿದ್ದ ಈ ಬೆಲೆ ಈಗ 10335 ರೂ.ಗೆ ಏರಿಕೆಯಾಗಿದೆ ಅಂತ ಮಾಹಿತಿ ನೀಡಿದರು. ನಾವು ಉತ್ಪಾದನಾ ವೆಚ್ಚಕ್ಕಿಂತ 52% ಮತ್ತು 55% ಹೆಚ್ಚು ನೀಡುತ್ತಿದ್ದೇವೆ. ಇದು ತೆಂಗು ಕೃಷಿಯಲ್ಲಿ ತೊಡಗಿರುವ ಲಕ್ಷಾಂತರ ರೈತರಿಗೆ ಅನುಕೂಲವಾಗಲಿದೆ ಮತ್ತು 12 ಕರಾವಳಿ ರಾಜ್ಯಗಳ ರೈತರ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ. ರೈತರಿಗೆ ಅನುಕೂಲ ವಾಗಲೆಂದು ಕೇಂದ್ರ ಸರ್ಕಾರ ಕೈಗೊಂಡ ಹಲವು ನಿರ್ಧಾರಗಳಲ್ಲಿ ಇದು ಕೂಡ ಒಂದು ಎಂದರು.



